ನ್ಯೂಸ್ ನಾಟೌಟ್ : ಎಸ್ ಎಸ್ ಎಲ್ ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣವಕಾಶ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನಾಂಕವಾಗಿದೆ.ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಈ ಮೂಲಕ ಲೋವರ್ ಡಿವಿಷನ್ ಕ್ಲರ್ಕ್, ಪೇಂಟರ್, ಡ್ರಾಟ್ಸ್ ಮನ್, ಕುಕ್, ಫೈರ್ ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಒಟ್ಟು 251 ಹುದ್ದೆಗಳು ಖಾಲಿ ಇದೆ . ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಮಲ್ಟಿ ಟಾಸ್ಕಿಂಗ್ ಸ್ಟಾಫ್ – 182 ಹುದ್ದೆಗಳು
- ಲೋವರ್ ಡಿವಿಷನ್ ಕ್ಲರ್ಕ್ – 27 ಹುದ್ದೆಗಳು
- ಪೇಂಟರ್ – 1 ಹುದ್ದೆ
- ಡ್ರಾಫ್ಟ್ಸ್ಮ್ಯಾನ್ – 1 ಹುದ್ದೆ
- ಸಿವಿಲ್ ಮೋಟಾರ್ ಡ್ರೈವರ್ – 8 ಹುದ್ದೆ
- ಪ್ರಿಂಟರ್ – 1 ಹುದ್ದೆ
- ಸಿನಿಮಾ ಪ್ರೊಜೆಕ್ಷನಿಸ್ಟ್ – 1 ಹುದ್ದೆ
- ಕುಕ್ – 12 ಹುದ್ದೆಗಳು
- ಫೈರ್ಮ್ಯಾನ್ – 10 ಹುದ್ದೆಗಳು
- ಕಮ್ಮಾರ – 1 ಹುದ್ದೆ
- ಬೇಕರ್ – 2 ಹುದ್ದೆಗಳು
- ಸೈಕಲ್ ರಿಪೇರಿ – 5 ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ- 251
- ಅರ್ಜಿ ಸಲ್ಲಿಸುವ ವಿಧಾನ :
ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಅಂಕಪಟ್ಟಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಎನ್ ಡಿ ಎ ಯ ಅಧಿಕೃತ ವೆಬ್ಸೈಟ್ ndacivrect.gov.in ಗೆ ಭೇಟಿ ನೀಡಿ, ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಜ. 20 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. - ವಯೋಮಿತಿ:
18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲವೊಂದು ಹುದ್ದೆಗಳಿಗೆ ಗರಿಷ್ಠ 25 ವರ್ಷ ಎಂದು ನಿಗದಿಪಡಿಸಿದೆ.
ಆಯ್ಕೆಯ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸ್ಕ್ರೀನ್ ಟೆಸ್ಟ್ ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಟ್ಟು ಖಾಲಿ ಹುದ್ದೆಗಳ 10 ಪಟ್ಟು ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
ವಿಶೇಷ ಸೂಚನೆ: ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ಅಂದರೆ ಕೆಲ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಇನ್ನು ಕೆಲ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ಹೀಗಾಗಿ ಅಧಿಸೂಚನೆಯನ್ನು ಪರಿಶೀಲಿಸಿದ ಬಳಿಕ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದು ಖಚಿತಪಡಿಸಿ ಅರ್ಜಿಗಳನ್ನು ಭರ್ತಿ ಮಾಡಬೇಕು.