ನ್ಯೂಸ್ ನಾಟೌಟ್ : ಭಾರತೀಯ ಸೈನ್ಯದಲ್ಲಿ ಹಲವಾರು ಮಂದಿ ವೀರ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ನಮ್ಮ ಕನ್ನಡಿಗ ಯೋಧರ ಸಂಖ್ಯೆಯೂ ಹೆಚ್ಚಾಗಿದೆ. ಕರಾವಳಿಯೂ ಇತ್ತೀಚಿಗೆ ದೇಶ ಸೇವೆಯಲ್ಲಿ ತನ್ನದೇ ಆದ ಯುವ ಸಮೂಹವನ್ನು ಸೃಷ್ಟಿಸುತ್ತಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಯೋಧರೊಬ್ಬರಿಗೆ ಸೇನಾ ದಿನಾಚರಣೆಯ ಹಿನ್ನೆಲೆಯಲ್ಲಿ ಗೌರವಿಸಿರುವುದು ಸುದ್ದಿಯಾಗಿದೆ.
ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐದು ಮಂದಿ ಭಾರತೀಯ ನಾಗರಿಕರನ್ನು ಜಮ್ಮುವಿನಲ್ಲಿ ಉಗ್ರರ ಕಪಿಮುಷ್ಠಿಯಿಂದ ರಕ್ಷಿಸಿದ ಅರಂತೋಡು ಗ್ರಾಮದ ಓ ಟೆಡ್ಕ ಕಮಲಾಕ್ಷ ಅವರ ಪುತ್ರ ಆಕಾಶ್ ಅವರನ್ನು ಭೂಸೇನೆಯ ಸೇನಾಧಿಕಾರಿ ಜನರಲ್ ಮೇಜರ್ ಸನ್ಮಾನಿಸಿದ್ದಾರೆ. ತನ್ನ ಜೀವದ ಹಂಗನ್ನೂ ತೊರೆದು ಐದು ಜೀವ ಉಳಿಸಲು ಹೋರಾಟ ನಡೆಸಿದ ಆಕಾಶ್ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.