ನ್ಯೂಸ್ ನಾಟೌಟ್ : ಮಧ್ಯಪ್ರದೇಶದ ಗ್ವಾಲಿಯಾರನಲ್ಲಿ ಸೇನಾ ತಾಲೀಮು ನಡೆಸುತ್ತಿದ್ದ ಭಾರತದ ವಾಯು ಸೇನೆಯ ವಿಮಾನಗಳಾದ ಸುಖೋಯ್-೩೦ ಮತ್ತು ಮಿರಾಜ್ ೨೦೦೦ ವಿಮಾನಗಳು ಪತನಗೊಂಡಿವೆ. ಈ ಘಟನೆಯಲ್ಲಿ ಓರ್ವ ಫೈಲೆಟ್ ಮೃತಪಟ್ಟಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ವಾಯು ಸೇನೆಯ ಎರಡು ವಿಮಾನಗಳಾದ ಸುಖೋಯ್-೨೦ ಮತ್ತು ಮಿರಾಜ್ ೨೦೦೦ ಆಗಸದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ.
ಈ ಯುದ್ದ ವಿಮಾನಗಳು ಪತನಗೊಂಡಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಸುಖೋಯ್ ವಿಮಾನದಲ್ಲಿ ಇಬ್ಬರು ಪೈಲೆಟ್ ಮತ್ತು ಮಿರಾಜ್ ನಲ್ಲಿ ಓರ್ವ ಫೈಲೆಟ್ ಇದ್ದ ಬಗ್ಗೆ ಮಾಹಿತಿ ಹೊರಬಂದಿದ್ದು, ಓರ್ವ ಫೈಲೆಟ್ ಮೃತರಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.