ನ್ಯೂಸ್ ನಾಟೌಟ್ : ಮನುಷ್ಯ ಎಷ್ಟೇ ಬ್ಯಸಿ ಇರಲಿ, ಎಷ್ಟೇ ಹಣ ಸಂಪಾದಿಸಲಿ ಆದರೆ ಆರೋಗ್ಯ ತುಂಬಾ ಮುಖ್ಯ. ಒಂದು ಸಲ ಆರೋಗ್ಯ ಹದಗೆಟ್ಟರೆ ಅದರಿಂದ ಚೇತರಿಸಕೊಳ್ಳುವುದು ತುಂಬಾ ಕಷ್ಟ.ಅದಕ್ಕಾಗಿ ನಾವೇನು ಮಾಡಬೇಕು.ಪ್ರತಿದಿನ ಹಣ್ಣು,ತರಕಾರಿಗಳನ್ನು ತಿನ್ನಬೇಕು.ಆದಷ್ಟು ಮಾಂಸಾಹಾರ ಸೇವನೆಯಿಂದ ದೂರವಿರಬೇಕು,ಜಂಕ್ ಫುಡ್, ಫಾಸ್ಟ್ ಫುಡ್ ಇತ್ಯಾದಿ ಆಹಾರಗಳು ನಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ.ಆರೋಗ್ಯಯುತ ಜೀವನ ನಡೆಸಬೇಕಾದರೆ ಉತ್ತಮ ಪೌಷ್ಟಿಕಾಂಶ, ಪ್ರೋಟೀನ್ ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕು.
ನಿಮ್ಮ ಆಹಾರ ಪದ್ಧತಿಯಲ್ಲಿ ಡ್ರೈಫ್ರೂಟ್ಸ್ ಗಳಿಗೂ ಮಾನ್ಯತೆ ಕೊಡಿ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಕರ್ಜೂರ, ಅಂಜುರ ಹೀಗೆ ನಾನಾ ವಿಧದ ಡ್ರೈಫ್ರೂಟ್ಸ್ ಸೇವನೆಗೂ ಪ್ರಾಮುಖ್ಯತೆ ನೀಡಬೇಕು. ಇದರಲ್ಲಿ ಪ್ರೋಟೀನ್, ಫೈಬರ್, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಅಡಕವಾಗಿದೆ. ಕೆಲವು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೇ ನಿಶ್ಯಕ್ತಿ ಜತೆಗೆ ಅನೇಕ ಕಾಯಿಲೆಯಿಂದ ವ್ಯಕ್ತಿಯನ್ನು ದೂರವಿಡುತ್ತದೆ. ಮತ್ತಷ್ಟು ಹಣ್ಣುಗಳು ದೇಹ ತೂಕ ಇಳಿಕೆ, ತೂಕ ಸಮತೋಲನ, ನಿದ್ರಾ ಹೀನತೆ, ರಕ್ತಹೀನತೆಯಂತಹ ಕಾಯಿಲೆಗಳು ಬರದಂತೆಯೂ ತಡೆಯುತ್ತದೆ. ಇದರಲ್ಲಿ ಒಣದ್ರಾಕ್ಷಿ ಚರ್ಮ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿಯ ನೀರನ್ನು ಕುಡಿದರೆ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರೊಬ್ಬರು ಹೇಳುತ್ತಾರೆ.
ಒಣದ್ರಾಕ್ಷಿ ನೆನಸಿಟ್ಟ ನೀರನ್ನು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ನಿಮ್ಮ ದೇಹಕ್ಕೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪೌಷ್ಟಿಕ ಆಹಾರ ಮತ್ತು ಕ್ಷೇಮ ತಜ್ಞ ವರುಣ್ ಕತ್ಯಾಲ್ ಅವರು ತಿಳಿಸಿದ್ದಾರೆ.
1. ರಕ್ತಹೀನತೆಯಿಂದ ದೂರ
ಒಣದ್ರಾಕ್ಷಿ ನೆನಸಿಟ್ಟ ನೀರಿನಲ್ಲಿ ಕಬ್ಬಿಣಾಂಶ ಯಥೇಚ್ಛವಾಗಿರುತ್ತದೆ. ಯಾವ ವ್ಯಕ್ತಿಯ ದೇಹದಲ್ಲಿ ಕಬ್ಬಿಣದ ಕೊರತೆ ಇರುತ್ತದೋ, ಆ ವ್ಯಕ್ತಿಯು ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಂದ ನರಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ರಕ್ತದ ಕೊರತೆಯಂತ ಸಮಸ್ಯೆ ಇದ್ದವರು ಒಣದ್ರಾಕ್ಷಿಯ ನೀರನ್ನು ಪ್ರತಿನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
2. ರೋಗ ನಿರೋಧಕ ಶಕ್ತಿ ಹೆಚ್ಚಳ
ಕೊರೋನಾದಂತಹ ಸಾಂಕ್ರಾಮಿಕ ರೋಗದ ವೇಳೆ ದೇಹದಲ್ಲಿ ರೋಗನಿರೋಧಕ ಶಕ್ತಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಒಣದ್ರಾಕ್ಷಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಮತ್ತು ಪ್ರೊಟೀನ್ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.
3. ಕೂದಲ ಬೆಳವಣಿಗೆಗೆ ಸಹಾಯಕ
ಒಣದ್ರಾಕ್ಷಿ ನೀರು ನಿಮ್ಮ ಕೂದಲನ್ನು ಗಟ್ಟಿಯಾಗಿಸಲು ತುಂಬಾ ಉಪಯುಕ್ತವಾಗಿದೆ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುವುದಲ್ಲದೆ ಕೂದಲಿನ ಬೆಳವಣಿಗೆಯೂ ಆಗಬಹುದು.
4. ಚರ್ಮ ರೋಗಗಳ ನಿವಾರಣೆಗೆ ಸಹಾಯಕ
ಒಣದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ, ಆದ್ದರಿಂದ ಇದರ ಸೇವನೆಯು ಅನೇಕ ಚರ್ಮದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.