ನ್ಯೂಸ್ ನಾಟೌಟ್ : ರಸ್ತೆ ಅಪಘಾತಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಪಂತ್ರನ್ನ ರಕ್ಷಿಸಿದ ಬಸ್ ಡ್ರೈವರ್ನ ಸನ್ಮಾನಿಸಲು ಉತ್ತರಾಖಂಡ್ ಸರಕಾರ ನಿರ್ಧರಿಸಿದೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸುಶಿನ್ ಮಾಸ್ ರನ್ನು ಸನ್ಮಾನಿಸುವುದಾಗಿ ತಿಳಿಸಲಾಗಿದೆ.
ದೆಹಲಿ ಡೆಹ್ರಾಡೂನ್ ಹೆದ್ದಾರಿಯಲ್ಲಿ ವೇಗವಾಗಿ ಬಂದ ಪಂತ್ ಕಾರು ಅಪಘಾತಕ್ಕೀಡ ದೃಶ್ಯವನ್ನು ಹರಿಯಾಣ ರೋಡ್ವೇಸ್ ಬಸ್ ನ ಡ್ರೈವರ್ ಮತ್ತು ಕಂಡಕ್ಟರ್ ಗಮನಿಸಿದ್ದಾರೆ. ಕೂಡಲೇ ತಾವಿದ್ದ ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ರಿಷಭ್ ಪಂತ್ರನ್ನು ಕಾಪಾಡಲು ಮುಂದಾಗಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲೇ, ಗಾಯಗೊಂಡಿದ್ದ ಪಂತ್ ಕಾರಿನಿಂದ ಹೊರಗೆ ಬರಲು ಯತ್ನಿಸಿದ್ರು. ಅಪಘಾತಗೊಂಡು ತೀವ್ರ ಗಾಯಗಳಿಂದ ಪಂತ್ ನರಳಾಡ್ತಿದ್ರು. ಈ ವೇಳೆ ಕಂಡಕ್ಟರ್, ಡ್ರೈವರ್ ಪಂತ್ರನ್ನು ರಕ್ಷಣೆ ಮಾಡಿ ಹೊರಗೆ ತಂದಿದ್ದಾರೆ. ಬಳಿಕ ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿಯಲು ಶುರುವಾಗಿದೆ.