ನ್ಯೂಸ್ ನಾಟೌಟ್ :ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದಾರೆ. ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಮೊದಲ ಸಿಖ್ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ಮನ್ಪ್ರೀತ್ ಮೋನಿಕಾ ಸಿಂಗ್ ಅವರು ಪಾತ್ರರಾಗಿದ್ದಾರೆ.ಈ ಮೂಲಕ ಗೌರವಕ್ಕೆ ಪಾತ್ರರಾಗಿದ್ದಾರೆ.ನನ್ನ ಪಾಲಿಗೆ ಇದೊಂದು ದೊಡ್ಡ ಅವಕಾಶ ಎಂದು ಹೇಳಿದ್ದಾರೆ.
ಯಾರಿವರು ಮಹಿಳೆ?
ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ಮನ್ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್ಗೆ ವಲಸೆ ಹೋದ ಪರಿಣಾಮ ಮನ್ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಹೀಗಾಗಿ ಮನ್ ಪ್ರೀತ್ ತಂದೆ ಭಾರತ ಮೂಲದವರು.ಮನ್ ಪ್ರೀತ್ ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್ನಲ್ಲಿ ವಾಸಿಸುತ್ತಿದ್ದಾರೆ .ಅಟಾರ್ನಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮನ್ಪ್ರೀತ್ ಅವರು ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳ ಜೊತೆ ಕೆಲಸ ಮಾಡಿದ್ದಾರೆ.ಹ್ಯಾರಿಸ್ ಕೌಂಟಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದೇನೆ ಎಂದು ಮನ್ಪ್ರೀತ್ ಮೋನಿಕಾ ಸಿಂಗ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಗೌರವದ ವಿಚಾರ ಎಂದು ಅವರು ಬರೆದು ಕೊಂಡಿದ್ದಾರೆ.ಯುಎಸ್ ನಲ್ಲಿ ಅಂದಾಜು 5 ಲಕ್ಷ ಸಿಖ್ಖರಿದ್ದಾರೆ. ಅದರಲ್ಲಿ 20 ಸಾವಿರ ಮಂದಿ ಹೂಸ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.