ನ್ಯೂಸ್ ನಾಟೌಟ್ : ನಟ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಅವರು ಮದುವೆ ಆಗಿ 22 ವರ್ಷಗಳ ಬಳಿಕ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ವಿಚ್ಛೇದನ ಸುದ್ದಿ ಈಗ ಕಾಡ್ಗಿಚ್ಚಿನಂತೆ ಹಬ್ಬಿದೆ.ದಳಪತಿ ಅವರು ಯುವನಟಿಯ ಜತೆ ಡೇಟಿಂಗ್ ಶುರು ಹಚ್ಚಿಕೊಂಡಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ನಟಿ ಕೀರ್ತಿ ಸುರೇಶ್ ಕಾರಣ :
ದಳಪತಿ ವಿಜಯ್ ಹಾಗೂ ಸಂಗೀತಾ ಮಧ್ಯೆ ವೈಮನಸ್ಸು ಎನ್ನಲಾದ ಸುದ್ದಿಗೆ ನಟಿ ಕೀರ್ತಿ ಸುರೇಶ್ ಅವರೇ ಕಾರಣ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಅಂದ ಹಾಗೆ ಈ ಜೋಡಿ ಈ ಹಿಂದೆ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದು, ಇಬ್ಬರ ಮಧ್ಯೆ ಆಪ್ತತೆ ಬೆಳೆದಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಇದು ದಳಪತಿ ವಿಜಯ್ ಪತ್ನಿ ಸಂಗೀತಾ ಗಮನಕ್ಕೆ ಬಂದಿದ್ದು ಈ ಕಾರಣಕ್ಕೆ ಅವರು ವಿಚ್ಛೇದನ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.
ದಳಪತಿ ವಿಜಯ್ ದಂಪತಿ ವಿಚ್ಛೇದನಕ್ಕೆ ರಶ್ಮಿಕಾ ಮಂದಣ್ಣ ಕೂಡಾ ಕಾರಣ ಎಂಬ ಸುದ್ದಿಯೊಂದು ಹರಿದಾಡಿತ್ತು.ವಿಜಯ್ ನಟನೆಯ ‘ವಾರಿಸು’ ಸಿನಿಮಾದಲ್ಲಿ ರಶ್ಮಿಕಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.ಆದರೆ ಅಸಲಿ ಕಾರಣ ನಟಿ ಕೀರ್ತಿ ಸುರೇಶ್ ಅವರೇ ಎಂದು ಬಾಲಿವುಡ್ ಹಂಗಾಮ್ ಹೇಳಿದೆ.ಆದರೆ ಇದು ಎಷ್ಟು ಸತ್ಯವೋ, ಎಷ್ಟು ಮಿಥ್ಯವೋ ಉತ್ತರ ಸದ್ಯದಲ್ಲೇ ಸಿಗಲಿದೆ.