ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ಮಂಗಳೂರು ಮೂಲದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ಮಂಗಳೂರು ಮೂಲದ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿ ನಡುವೆ ವಿವಾಹ ಸಂಭ್ರಮವೆರ್ಪಟ್ಟಿತ್ತು.ಈ ಮದುವೆ ಸುದ್ದಿ ಕೇಳಿ ಮಂಗಳೂರಿಗರು ಬಾರಿ ಸಂಭ್ರಮಿಸಿದ್ದರು.ಅದ್ದೂರಿ ಮದುವೆ ಸಮಾರಂಭದಲ್ಲಿ ಬಾಲಿವುಡ್ ನ ನಟ-ನಟಿಯರು ಹಾಗೂ ಕ್ರೀಡಾ ದಿಗ್ಗಜರು ಪಾಲ್ಗೊಂಡಿದ್ದರು.ಈ ವೈಭವದ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಆಥಿಯಾ ಶೆಟ್ಟಿಯವರ ಗುಲಾಬಿ ಬಣ್ಣದ ಚಿಕಂಕರಿ ಲೆಹಂಗಾ ..!
ಡಿಸೈನ್ ಮಾಡಿದ್ಯಾರು?
ಅಬ್ಬಬ್ಬಾ ದೇವಲೋಕದ ಸುಂದರಿಯಂತೆ ಕಾಣಿಸುತ್ತಿದ್ದ ಇವರ ಚಿಕಂಕರಿ ಲೆಹಂಗಾವನ್ನು ಯಾರು ಡಿಸೈನ್ ಮಾಡಿದ್ದರು? ಎಷ್ಟು ಟೈಮ್ ಬೇಕಾಯ್ತು? ವಿಷಯಗಳ ಬಗ್ಗೆ ನಿಮಗೆ ಗೊತ್ತಿದೆಯೇ? ದೇವಕನ್ಯೆಯರನ್ನೂ ನಾಚಿಸುವಂತೆ ಅಥಿಯಾ ಮದುವೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಪ್ರಮುಖ ಕಾರಣ ಅವರು ಧರಿಸಿದ್ದ ಲೆಹೆಂಗಾ. ಈ ಲೆಹೆಂಗಾ ತಯಾರಿಸಿದ್ದು ಡಿಸೈನರ್ ಅನಾಮಿಕಾ ಖನ್ನಾ. ಈ ಹಿಂದೆ ಕಾಜಲ್ ಅಗರ್ವಾಲ್, ಸೋನಮ್ ಕಪೂರ್ ಮತ್ತು ರಿಚಾ ಚಡ್ಡಾ ಅವರಿಗೆ ವಧುವಿನ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದ ಅವರು ಇದೀಗ ಆಥಿಯಾ ಶೆಟ್ಟಿ ಅವರಿಗೆ ಲೆಹಂಗಾ ಡಿಸೈನ್ ಮಾಡಿದ್ದಾರೆ.
ಬರೋಬ್ಬರಿ 10,000 ಗಂಟೆ :
ಅಥಿಯಾ ಧರಿಸಿದ್ದ ಈ ಲೆಹೆಂಗಾವನ್ನು ಕೈಯಿಂದಲೇ ಡಿಸೈನ್ ಮಾಡಲಾಗಿದ್ದು, ಸೂಕ್ಷ್ಮವಾದ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಈ ಲೆಹೆಂಗಾ ತಯಾರಿಸಲು ಸುಮಾರು 10000 ಗಂಟೆ ತೆಗೆದುಕೊಳ್ಳಲಾಗಿದೆ.ಅಂದರೆ ಸರಿ ಸುಮಾರು 1 ವರ್ಷಕ್ಕಿಂತಲೂ ಅಧಿಕ. ಜರ್ದೋಜಿ ಮತ್ತು ಜಾಲಿ ಕೆಲಸ, ಮಿನಿಮಲಿಸ್ಟಿಕ್ ಮತ್ತು ರಾಯಲ್ ಬ್ರೈಡಲ್ ಲುಕ್ ಕಾಣಿಸಲೆಂದು ಶ್ರಮ ವಹಿಸಿ ಈ ಬಟ್ಟೆ ಸಿದ್ಧಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಗಮನ ಸೆಳೆದ ಚಿಕಂಕರಿ ವರ್ಕ್:
ವಿಶೇಷವೆಂದರೆ ಈ ಲೆಹಂಗಾದಲ್ಲಿ ಅತ್ಯಾಧುನಿಕ ಚಿಕಂಕರಿ ವರ್ಕ್ ಇದ್ದು ಎಲ್ಲರ ಗಮನ ಸೆಳೆಯುವಂತೆ ಮಾಡಿತ್ತು. ಹಾಗಾಗಿ ಇದಕ್ಕೆ ಐಷಾರಾಮಿ ಲುಕ್ ಬಂದಿದೆ. ಅನೇಕ ವರ್ಷಗಳ ನಂತರವೂ ಅದರ ಆಕರ್ಷಣೆಯು ಹಾಗೆಯೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ರೇಷ್ಮೆ ಬಟ್ಟೆಯೊಂದಿಗೆ ಸಿಲ್ಕ್ ಆರ್ಗನ್ಜಾ ಸಂಯೋಜಿಸಿ ಈ ಲೆಹೆಂಗಾ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ಪೋಲ್ಕಿ ಜ್ಯುವೆಲ್ಲರಿಯನ್ನು ಅಥಿಯಾ ಶೆಟ್ಟಿ ಧರಿಸಿದ್ದರು. ಇವೆಲ್ಲದಕ್ಕೂ ಪ್ರಮುಖವಾಗಿ ಅಥಿಯಾ ಮಾಡಿದ್ದ ಲೈಟ್ ಮೇಕ್ ಅಪ್ ಆಕೆಯ ನೈಜ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು.