ನ್ಯೂಸ್ ನಾಟೌಟ್ : ಮಾಂಸ ಪ್ರಿಯರಿಗೆ ಅತೀ ಕಡಿಮೆ ಬೆಲೆಗೆ ಸಿಗುವ ಪರ್ದಾಥ ಎಂದರೆ ಮೊಟ್ಟೆ ಹಾಗಾಗಿ ಹೆಚ್ಚು ಜನರು ಮೊಟ್ಟೆಯನ್ನು ಖರೀದಿಸುತ್ತಾರೆ. ಆದರೆ ಇದೀಗ ಮೊಟ್ಟೆಯ ಬೆಲೆ ದಿಢೀರನೇ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಆಹಾರ ಪರ್ದಾಥಗಳ ಬೆಲೆ ಏರಿಕೆ ಆದ ಹಾಗೇ, ಕೋಳಿಗಳು ತಿನ್ನುವ ಆಹಾರಗಳ ಬೆಲೆಯು ಏರಿಕೆಯಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ೬.೩೦ರೂಪಾಯಿ ಬೆಲೆಯಿದೆ. ಉತ್ಪಾದನಾ ವೆಚ್ಚ ೫.೩೦ರೂಪಾಯಿಗೆ ಏರಿಕೆಯಾಗಿರುವುದು ಹಾಗೂ ಚಳಿಯಿಂದಾಗಿ ಉತ್ಪಾದನೆಯಲ್ಲಿ ಶೇ.೯೦ರಿಂದ ಶೇ೭೦ಕ್ಕೆ ಇಳಿಕೆಯಾದ ಕಾರಣ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಹೆಚ್ಚಾಗಿದೆ.
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯ ಅಧ್ಯಕ್ಷ ಡಿ.ಕೆ.ಕಾಂತರಾಜು, ಕೋಳಿಗಳಿಗೆ ಶೇ.೭೫ರಷ್ಟು ಮೆಕ್ಕೆ ಜೋಳವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಕೋಳಿ ಆಹಾರಕ್ಕೆ ಕೇಜಿಗೆ ರೂ. ೨೧ರಿಂದ ೨೨ ಇತ್ತು. ಆದರೆ ಈಗ ರೂ.೨೬ ಆಗಿದೆ. ಜೊತೆಗೆ ಸೋಯಾ ಫುಡ್ ಕೂಡ ನೀಡಲಾಗುತ್ತಿದೆ, ಆ ಸೋಯಾ ರೂ. ೯೦ರಿಂದ ೧೧೦ ರವರೆಗೆ ಏರಿಕೆಯಾಗಿದೆ.
ಕಳೆದ ಒಂದು ತಿಂಗಳಿನ ಹಿಂದೆಯೇ ಮೊಟ್ಟೆಯ ಬೆಲೆ ಏರಿಕೆಯಾಗಿತ್ತು. ಆದರೆ ಈಗ ಚಳಿಗಾಲ ಕೊನೆಯಾಗುತ್ತಿದ್ದಂತೆ ತುಸು ಇಳಿಕೆಯಾಗಿದೆ ಎಂದು ಕುಕ್ಕುಟ ಮಹಾಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಫಾರ್ಮ್ ಕೋಳಿ ಮೊಟ್ಟೆಯ ಹೋಲ್-ಸೇಲ್ ದರ ರೂ.೫.೭೫ ಪೈಸೆ ಇತ್ತು.
ಈಗ ಫಾರ್ಮ್ ಮೊಟ್ಟೆ ಹೋಲ್ ಸೇಲ್ ದರ ರೂ ೫ ಹಾಗೂ ನಾಟಿಕೋಳಿ ಮೊಟ್ಟೆಯ ಬೆಲೆ ರೂ ೫.೨೦ ಪೈಸೆ ಇದೆ. ಆದರೆ ಸಣ್ಣ ಸಣ್ಣ ಅಂಗಡಿಗಳಲ್ಲಿ ದರ ಇನ್ನೂ ಇಳಿಕೆಯಾಗಿಲ್ಲ. ೨೦೨೨ರ ಜನವರಿಯಲ್ಲಿ ೧೦೦ ಮೊಟ್ಟೆಯ ಒಂದು ಬ್ಯಾಚ್ ಗೆ ರೂ.೪೩೭.೫೮ಇತ್ತು. ಈಗ ರೂ. ೫೭೫ ರಿಂದ ರೂ ೬೦೦ವರೆಗೆ ಏರಿಕೆಯಾಗಿರುವುದು ಕಲವಳಕಾರಿ ವಿಷಯವಾಗಿದೆ.