ನ್ಯೂಸ್ ನಾಟೌಟ್ :ಚಿಕ್ಕಮಂಗಳೂರು ಜಿಲ್ಲೆಯ ಕಳಸದಲ್ಲಿ ಅಪ್ರಾಪ್ತ ವಯಸ್ಕ ಹುಡುಗಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು
ಆರೋಪಿಯನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತ ನಿತೀಶ್ ನನ್ನು ಪೊಲೀಸರು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಆರೋಪಿ ನಿತೀಶ್ ಮತ್ತು 17 ವರ್ಷದ ಹುಡುಗಿ ದೀಪ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪ್ರೇಮಿಗಳ ನಡುವೆ ಜಗಳವಾದ ಕಾರಣ ಹುಡುಗಿ ಜನವರಿ 10ರಂದು ವಿಷ ಸೇವನೆ ಮಾಡಿದ್ದಳು. ಜನವರಿ 14ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.ಯುವತಿ ಸಾಯುವ ಮುನ್ನ ಆಸ್ಪತ್ರೆ ಬೆಡ್ ಮೇಲೆ ಸಾವಿಗೆ ಕಾರಣ ಬರೆದಿದ್ದಳು. ಅದರಲ್ಲಿ ತನ್ನ ಪ್ರೇಮಿ ನಿತೀಶ್ ಕುರಿತಾಗಿ ಬರೆದಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿತೀಶ್ ನಾಪತ್ತೆಯಾಗಿದ್ದ. ಇದೀಗ ಕುದುರೆಮುಖ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.