ನ್ಯೂಸ್ ನಾಟೌಟ್: ಮಂಗಳೂರು ಮಂಗಳೂರಿನ ನಾಗುರಿಯಲ್ಲಿ ಇತ್ತೀಚೆಗೆ ಸಂಬಂಧಿಸಿದ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆ ಚುರುಕುಗೊಂಡಿದೆ.ಮಂಗಳೂರಿನ ಕೊಣಾಜೆ ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಐ ಎ ಅಭಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಶಿಕ್ಷಣ ಸಂಸ್ಥೆಗೆ ದಾಳಿ:
ಕುಕ್ಕರ್ ಬಾಂಬ್ ಪ್ರಕರಣದ ಶಂಕಿತ ಉಗ್ರ ಶಾರೀಶ್ ವಿಚಾರಣೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ಮಾಜ್ ಮುನೀರ್ ಎಂಬಾತ ಅದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ. ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಬಂದಿಳಿದ ಎನ್ ಐ ಎ ಯ ಏಳು ಸದಸ್ಯರ ತಂಡ ಕಾಲೇಜಿನಲ್ಲಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಉಡುಪಿ ಮೂಲದ ರಿಯಾನ್ ಎಂಬ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಏಕಕಾಲದಲ್ಲಿ ತನಿಖೆ:
ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದ ಎರಡು ತಿಂಗಳ ಮೊದಲೇ ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ನ ಡೆಸಿರುವುದು ಪತ್ತೆಯಾಗಿತ್ತು. ಪ್ರಕರಣದಲ್ಲಿ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಾಝ್ ಮುನೀರ್ ಮತ್ತು ಯಾಸಿನ್ ಎಂಬುವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಮೊಹಮ್ಮದ್ ಶಾರೀಕ್ ತಲೆಮರೆಸಿಕೊಂಡ ಬಳಿಕ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ . ಎನ್ಐಎ ಅಧಿಕಾರಿಗಳು ಶಿವಮೊಗ್ಗ ಮತ್ತು ಮಂಗಳೂರು ಬ್ಲಾಸ್ ಪ್ರಕರಣದ ಬಗ್ಗೆ ಏಕಕಾಲದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.