ನ್ಯೂಸ್ ನಾಟೌಟ್ : ಮಡಿಕೇರಿಯಲ್ಲಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎನ್ನಲಾದ ಸ್ಪೋಟಕ ಸುದ್ದಿಯೊಂದು ವರದಿಯಾಗಿದೆ. ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿ ಐವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಜ.14 ರಂದು ಮಕರ ಸಂಕ್ರಮಣ.ಈ ವೇಳೆ ಬಜರಂಗ ದಳದ ಕೆಲವು ಯುವಕರ ತಂಡ ಹಬ್ಬದ ಹಿನ್ನೆಲೆ ಹಾಡಿಯಲ್ಲಿ ಇರುವ ಆದಿವಾಸಿಗಳಿಗೆ ಎಳ್ಳು ಬೆಲ್ಲ ಹಂಚಲು ಹೋಗಿದ್ದರು. ಈ ಸಂದರ್ಭ ಕೆಲವು ಕ್ರಿಶ್ಚಿಯನ್ ಕಾರ್ಯಕರ್ತರು ಹಾಡಿಯ ಜನರನ್ನು ಒಂದೇ ಕಡೆ ಕೂರಿಸಿಕೊಂಡು ಬೈಬಲ್ ಬೋಧನೆ ಮಾಡುತ್ತಿದ್ದರು ಎನ್ನಲಾಗಿದೆ . ಇದನ್ನು ಕಂಡು ಕೆರಳಿದ ಯುವಕರು ಆವರನ್ನು ತರಾಟೆಗೆ ತೆಗೆದುಕೊಂಡರು ಎಂಬ ವಿಷಯ ಬೆಳಕಿಗೆ ಬಂದಿದೆ.
250 ಮಂದಿ ಮತಾಂತರ?
ಈ ನಡುವೆ ಪ್ರತಿ ಭಾನುವಾರ ಹಾಡಿಗಳಿಗೆ ಬಂದು ಬೈಬಲ್ ಬೊಧನೆ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ವರದಿಯಾಗಿದೆ. ಹಾಡಿಯಲ್ಲಿ ಸುಮಾರು 500 ಕುಟುಂಬಗಳಲ್ಲಿ ಈಗಾಗಲೇ 250 ಮಂದಿಯನ್ನು ಮತಾಂತರ ಮಾಡಲಾಗಿದೆ ಎಂದು ಬಜರಂಗದಳದ ಯುವಕರು ಅರೋಪಿದ್ದಾರೆ.ಪ್ರತಿ ಆದಿವಾಸಿಗಳಿಗೂ ಬೈಬಲ್ ಪುಸ್ತಕವನ್ನು ಹಂಚಿ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿ ಮತಪ್ರಚಾರಕ್ಕೆ ಬಂದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡ ಯುವಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.