ನ್ಯೂಸ್ ನಾಟೌಟ್ : ನೀವು ಪ್ರತೀ ದಿನಾ ಬೆಳಗ್ಗೆ ಎದ್ದು ಎಳನೀರು ಕುಡಿಯುವುದರಿಂದ ಆರೋಗ್ಯಕರ ವ್ಯಕ್ತಿಯಾಗಲು ಸಹಾಯಕವಾಗಿದೆ.ಅಲ್ಲದೆ ಸೋಡಿಯಂ, ವಿಟಮಿನ್ ಎ,ಸಿ, ಡಿ ಅನೇಕ ಖನಿಜಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಕೆಲ ಪ್ರಮುಖ ಪ್ರಯೊಜನಗಳು ಈ ಕೆಳಗಿನಂತಿವೆ:
* ಚರ್ಮ, ಕೂದಲು ಮತ್ತು ರಕ್ತದೊತ್ತಡ ನಿಯಂತ್ರಣ:
ತೆಂಗಿನ ನೀರು ಕುಡಿಯುವುದರಿಂದ ನೀರಿನಲ್ಲಿದ್ದ ಪೋಷಕಾಂಶಗಳು ಚರ್ಮವನ್ನು ರಕ್ಷಣೆ ಮಾಡುತ್ತದೆ. ಅತಿಯಾದ ಆಯಾಸ ಮತ್ತು ಕೂದಲಿನ ಪೋಷಕಾಂಶಗಳನ್ನು ಬೆಳೆಸುವಲ್ಲಿ ಸಹಾಯಕವಾಗಿದೆ.ತೆಂಗಿನ ನೀರಿನಲ್ಲಿ ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ಗಳು, ಸಕ್ಕರೆ ಮತ್ತು ಎಲೆಕ್ಟ್ರೋಲೈಟ್ಗಳಿವೆ ಆದ್ದರಿಂದ ಕುಡಿಯುವುದರಿಂದ ನಿಮ್ಮ ಚರ್ಮ ಮತ್ತು ಕೂದಲಿಗೆ, ರಕ್ತದೊತ್ತಡ, ಹೃದಯದ ರಕ್ತಪರಿಚಲನೆಗೆ ಸಹಾಯಕವಾಗಿದೆ.
* ನಿರ್ಜಲೀಕರಣ ನಿವಾರಣೆ:
ನಿರ್ಜಲೀಕರಣವನ್ನು ನಿವಾರಿಸಲು ತೆಂಗಿನ ನೀರನ್ನು ಕುಡಿಯುವುದು ಉತ್ತಮ ಮಾರ್ಗವಾಗಿದೆ. ಇದು ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯನ್ನು ಪೂರೈಸುವ ಮೂಲಕ ದೇಹವನ್ನು ಸದೃಢವಾಗಿರಿಸುತ್ತದೆ.
* ಮೂಳೆಗಳು ಬಲಗೊಳ್ಳುತ್ತವೆ:
ತೆಂಗಿನ ನೀರು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ(Strong Bones). ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಆಸ್ಟಿಯೋಪೆನಿಯಾದಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
* ಗ್ಯಾಸ್ಸ್ಟಿಕ್ ಸಮಸ್ಯೆ ಮತ್ತು ಅಜೀರ್ಣ ನಿವಾರಣೆ:
ತೆಂಗಿನ ನೀರು ದೇಹದಲ್ಲಿ ಪಿ ಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ಇದರಿಂದ ನಿಮಗೆ ಅಸಿಡಿಟಿ ಮತ್ತು ಎದೆಯುರಿ ಸಮಸ್ಯೆಗಳು ಇರುವುದಿಲ್ಲ. ತೆಂಗಿನ ನೀರು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೊಟ್ಟೆಯುಬ್ಬರ ಮತ್ತು ಗ್ಯಾಸ್ ಸಮಸ್ಯೆ ಇಲ್ಲ. ಫೈಬರ್ ಅಧಿಕವಾಗಿರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
* ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ:
ಮೂತ್ರದಲ್ಲಿ ಕಲ್ಲಿನ ಸಮಸ್ಯೆಯ ಪರಿಹಾರಕ್ಕೆ ಸಹಕಾರಿಯಾಗಿದ್ದು, ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.