ನ್ಯೂಸ್ ನಾಟೌಟ್ :ಬೆಲೆಯೇರಿಕೆ ಬಿಸಿಯಲ್ಲಿ ಬೇಯುತ್ತಿದ್ದ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.ಹೊಸ ವರ್ಷದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದ್ದು ,ಗ್ರಾಹಕರಿಗೆ ಬೆಲೆಯೇರಿಕೆಯ ಶಾಕ್ ತಟ್ಟಿದೆ. ಈ ಹಿಂದೆಯೂ ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುತ್ತಿತ್ತು. ಅದರ ಬೆನ್ನಲ್ಲೇ ಈ ವರ್ಷವು ಬೆಲೆ ಏರಿಕೆಯಾಗಿದ್ದು ,ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬೆಲೆ ಏರಿಕೆ ಬಿಸಿ:
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇದೀಗ ಹೆಚ್ಚಳವಾಗಿದ್ದು, ವಿದೇಶಿ ವಿನಿಮಯ ದರಗಳ ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾಬೆಲೆಯನ್ನು ಅವಲಂಬಿಸಿ ಪ್ರತಿದಿನ ಬದಲಾಗುತ್ತಿದೆ. ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರಗಳನ್ನು ನಿರ್ಧರಿಸುತ್ತದೆ. ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಗ್ಗೆ 6 ಗಂಟೆಯ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿದೆ.
ಉತ್ತರ ಪ್ರದೇಶ, ರಾಜಸ್ಥಾನವರೆಗಿನ ಹಲವು ನಗರಗಳಲ್ಲಿ ಇಂಧನದ ಬೆಲೆಯಲ್ಲಿ ಏರಿಕೆಯಾಗಿದೆ. ಸರಕಾರಿ ತೈಲ ಕಂಪನಿಗಳ ಪ್ರಕಾರ ಪೆಟ್ರೋಲ್ ದರ 35 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ ಅದರ ಬೆಲೆ ಮೂಲ ಬೆಲೆಗಿಂತ ಹೆಚ್ಚಾಗುವ ಕಾರಣ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದೆ.
ಪೆಟ್ರೋಲ್ ದರ ತಿಳಿಯಬೇಕಾದರೆ, ಎಸ್ಎಂ.ಎಸ್ ಮೂಲಕ ಪೆಟ್ರೋಲ್ ಡೀಸೆಲ್ ನ ದೈನಂದಿನ ದರವನ್ನು ತಿಳಿಯಬಹುದು. ಇಂಡಿಯನ್ ಆಯಿಲ್ ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಮತ್ತು BPCL ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು 9223112222 ಗೆ ಟೈಪ್ ಮಾಡುವ ಹಾಗೂ 9224992249 ಗೆ SMS ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಆದರೆ, HPCL ಗ್ರಾಹಕರು HP ಹಣ ಮತ್ತು ಅವರ ಸಿಟಿ ಕೋಡ್ ಅನ್ನು 9222201122 ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.