ನ್ಯೂಸ್ ನಾಟೌಟ್: ಬೆಳ್ಳಾರೆಯ ವೇದಾಮೃತ ಚಿಕಿತ್ಸಾಲಯದಲ್ಲಿ ಜ. 15 ಆದಿತ್ಯವಾರ ಉಚಿತ ಮೂಳೆ ಖನಿಜಾಂಶ ಸಾಂದ್ರತೆ (BMD TEST)ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆಯ ಅವಶ್ಯಕತೆವುಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಯಾರೆಲ್ಲ ಹೋಗಬಹುದು?
30 ವರ್ಷ ಮೇಲ್ಪಟ್ಟವರು, ಋತುಸ್ರಾವ ನಿಂತ ಮಹಿಳೆಯರು, ಮೂಳೆ ಸವೆತದ ಕೌಟುಂಬಿಕ ಹಿನ್ನಲೆ ಇರುವವರು, ಇತ್ತೀಚೆಗೆ ಮೂಳೆ ಮುರಿತಕ್ಕೆ ಒಳಗಾದವರು, ಆಗಾಗ ಗಂಟುನೋವು ಕಾಣಿಸಿಕೊಳ್ಳುವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ವೇದಾಮೃತ ಚಿಕಿತ್ಸಾಲಯದ ತಜ್ಞ ವೈದ್ಯರಾದ ಡಾ. ಕಾವ್ಯ ಜೆ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಬಿರವು ಪೂರ್ವಾಹ್ನ 10-00 ರಿಂದ ಸಂಜೆ 3-00 ಗಂಟೆಯವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.
ಸ್ಥಳ ಮಾಹಿತಿ:
ವೇದಾಮೃತ ಚಿಕಿತ್ಸಾಲಯ,ಹರ್ಷ ಕಾಂಪ್ಲೆಕ್ಸ್, ಕಿರಣ್ ಪ್ರಿಂಟರ್ಸ್ ಎದುರು, ಕೆಳಗಿನ ಪೇಟೆ, ಬೆಳ್ಳಾರೆ