ನ್ಯೂಸ್ ನಾಟೌಟ್ : ಮೆಟ್ರೋ ಕಾಮಗಾರಿ ವೇಳೆ ದುರಂತ ಸಂಭವಿಸಿದೆ. ಬಿಎಂಆರ್ಸಿ ನಿರ್ಲ್ಯಕ್ಷ್ಯಕ್ಕೆ ಮೆಟ್ರೋ ಪಿಲ್ಲರ್ ನ ರಾಡ್ ಬಿದ್ದು ತಾಯಿ ಮಗು ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಹೆಚ್ ಬಿಆರ್ ಲೇಔಟ್ ನಲ್ಲಿಮಂಗಳವಾರ ನಡೆದಿದೆ.
ಪಿಲ್ಲರ್ ಬಿದ್ದು ಇಬ್ಬರು ಕೂಡ ಗಂಭೀರ ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರನ್ನು ತೇಜಸ್ವಿನಿ (35) ಹಾಗೂ ವಿಹಾನ್ (2.5) ಎಂದು ಗುರುತಿಸಲಾಗಿದೆ. ಇದೀಗ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.