ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬನನ್ನು ಸ್ಕೂಟಿ ಸವಾರನೊಬ್ಬ ಬೈಕ್ನಲ್ಲಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ಉದ್ಯಾನನಗರಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ. ಈ ವೇಳೆ ರೊಚ್ಚಿ ಗೆದ್ದ ಸಾರ್ವಜನಿಕರು ಸ್ಕೂಟಿಯನ್ನು ಅಡ್ಡಗಟ್ಟಿ ದುಷ್ಕರ್ಮಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮಾಗಡಿ ಸಮೀಪ ರಾಂಗ್ ಸೈಡ್ನಲ್ಲಿ ಟಾಟ ಸುಮೊಗೆ ಸ್ಕೂಟಿಯೊಂದು ಅಡ್ಡ ಬಂದಿದೆ. ತಕ್ಷಣ ಗಾಡಿಯಿಂದ ಕೆಳಕ್ಕೆ ಇಳಿದು ಪ್ರಶ್ನಿಸಲು ಮುಂದಾದಾಗ ಸ್ಕೂಟಿ ಸವಾರ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸುಮೋ ಚಾಲಕ ಆತನ ಸ್ಕೂಟಿಯನ್ನು ಹಿಂದೆಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಇದು ಗೊತ್ತಿದ್ದರೂ ನಿಲ್ಲಿಸದ ದುಷ್ಕರ್ಮಿ ಆತನ ಸಹಿತವಾಗಿ ರಸ್ತೆಯಲ್ಲಿ ಬರೋಬ್ಬರಿ ೧ ಕಿ.ಮಿ ವರೆಗೆ ಸ್ಕೂಟಿ ಚಾಲಕ ಎಳೆದುಕೊಂಡು ಹೋಗಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ವಾಹನ ಅಡ್ಡಗಟ್ಟಿ ಆತನನ್ನು ಹಿಡಿದಿದ್ದಾರೆ. ಮಾತ್ರವಲ್ಲ ದುಷ್ಕರ್ಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ವಿಜಯ ನಗರ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.