ನ್ಯೂಸ್ ನಾಟೌಟ್ : ಸಾಧಿಸಬೇಕೆನ್ನುವ ಛಲವಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಎಂತಹ ಕಠಿಣ ಸವಾಲುಗಳನ್ನು ಕೂಡ ಅತಿ ಸುಲಭವಾಗಿ ಜಯಿಸಬಹುದು ಎಂಬುದಕ್ಕೆ ಇಲ್ಲೊಂದು ಮಹಿಳೆಯರ ತಂಡ ಉದಾಹರಣೆಯಾಗಿ ನಿಂತಿದೆ.ಹಳ್ಳಿಗಳಲ್ಲಿ ಸಾಮಾನ್ಯರಂತಿದ್ದ ಮಹಿಳೆಯರು ಇದೀಗ ರಾಜ್ಯಮಟ್ಟದಲ್ಲಿ ಖೋ ಖೋ ಪಂದ್ಯಾಟವಾಡಲು ಸಿದ್ದಗೊಂಡಿದ್ದಾರೆ!!.ಇದು ಬೆಳ್ತಂಗಡಿ ತಾಲೂಕಿನ ಬಂದಾರಿನ ಗ್ರಾಮ ಪಂಚಾಯತ್ ಮಹಿಳೆಯರ ಸಾಧನಾಗಾಥೆಯ ಕಥೆ…
ಮಹಿಳೆಯರ ಸಾಧನೆ:
ಮಂಗಳೂರಿನ ಮಂಗಳಾ ಕ್ರೀಡಾಂಗದಲ್ಲಿ ನಡೆದ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ಈ ಪಂದ್ಯಾಟ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಈ ಪಂದ್ಯಾಟ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ 2022-23 ಸಾಲಿನ ಮಹಿಳೆಯರ ಖೋ ಖೋ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ತಂಡ ಮಂಗಳೂರು ತಂಡವನ್ನು ಮಣಿಸಿದ್ದು, ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,ಬಂದಾರು ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಾದ ಪ್ರಶಾಂತ್,ಬಂದಾರು ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀಮತಿ ವಿಮಲ, ಕೃಷ್ಣ ಕುಲಾಲ್ ಶ್ರೀರಾಮ ನಗರ,ಗಿರೀಶ್ ಗೌಡ ಬಿ.ಕೆ.ಮೈರೋಳ್ತಡ್ಕ,ಪ್ರಶಾಂತ ಗೌಡ ನಿರುಂಬುಡ,ಗ್ರಾ.ಪಂ ಸಿಬ್ಬಂದಿ ಮೋಹನ್ ಬಂಗೇರ ಮೈರೋಳ್ತಡ್ಕ ಉಪಸ್ಥಿತರಿದ್ದರು.