ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಎಂಜಿನ್ನ ಸೆನ್ಸಾರ್ನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿದು ಕರಕಲಾದ ಘಟನೆ ನಡೆದಿದೆ.ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಬಚಾವ್ ಆಗಿದ್ದಾರೆ.
ಏನಿದು ಘಟನೆ?
ಸುಂಟಿಕೊಪ್ಪದ ಆಟೋ ರಿಕ್ಷಾ ಚಾಲಕ ಶಿವರಾಜ್ ನಿನ್ನೆ ರಾತ್ರಿ 9 ಗಂಟೆಗೆ ಸುಂಟಿಕೊಪ್ಪದಿಂದ ಅಂದಗೋವೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯದ ತಿಲಕ ಎಸ್ಟೇಟ್ ಬಳಿ ಚಾಲಕನ ಸೀಟ್ ಬಿಸಿಯಾಗಲಾರಂಭಿಸಿದೆ. ಚಾಲಕ ಕೆಳಗಿಳಿದು ನೋಡಿದಾಗ ಸೀಟ್ ಕೆಳಭಾಗದಲ್ಲಿರುವ ಎಂಜಿನ್ನ ಸೆನ್ಸಾರ್ನಲ್ಲಿ ಬೆಂಕಿ ಕಾಣಿಸಿತು.ಸದ್ಯ ರಿಕ್ಷಾ ಚಾಲಕ ಈ ಘಟನೆಯಿಂದ ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.