ಭಕ್ತಿಭಾವ

ಮಹಾಶಿವ ರಾತ್ರಿ ಸಂಭ್ರಮ, ವಿಷಕಂಠನಿಗೆ 11 ಕೆ.ಜಿ ತೂಕದ ಚಿನ್ನದ ಮುಖವಾಡ

415

ನ್ಯೂಸ್ ನಾಟೌಟ್ : ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಸಡಗರ. ಬೆಳಗ್ಗೆಯಿಂದ ಭಕ್ತಾಧಿಗಳು ಶಿವದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪೆಡದು ಪುನೀತರಾಗಿದ್ದಾರೆ. ಈ ವೇಳೆ ಮೈಸೂರು ರಾಜವಂಶಸ್ಥ ಜಯಚಾಮ ರಾಜೇಂದ್ರ ಒಡೆಯರ್ ಅವರು ಮೈಸೂರಿನ ತ್ರಿನೇಶ್ವರ ದೇವಾಲಯಕ್ಕೆ 11 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಸಮರ್ಪಿಸಿದ್ದಾರೆ.

ಮೈಸೂರು ಅರಮನೆ ರಾಜವಂಶದ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಹಿನ್ನಲೆಯಲ್ಲಿ ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದ ಶಿವನಿಗೆ ವಿಶೇಷವಾಗಿ ಅಲಂಕಾರಗೊಳಿಸಿದ 11 .ಕೆ.ಜಿ. ತೂಕದ ಚಿನ್ನದ ಮುಖವಾಡ ಸಮರ್ಪಸಿದರು. ಈ ವೇಳೆ ಅರಮನೆ ಅಧಿಕಾರಿಗಳು, ಸಿಬ್ಬಂದಿ , ಕ್ಷೇತ್ರ ಕಾರ್ಯನಿರ್ವಹಣಾಧೀಕಾರಿಗಳು ಉಪಸ್ಥಿತರಿದ್ದರು.

See also  ಕಲ್ಲುಗುಂಡಿ: ಶ್ರೀಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲಾಧಾರಿಗಳ ಯಾತ್ರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget