ವರದಿ: ರಸಿಕಾ ಮುರುಳ್ಯ
ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ಯಕ್ಷಗಾನ ದಿಗ್ಗಜ ದಿವಂಗತ ಕುಂಬ್ಳೆ ಸುಂದರ ರಾವ್ ಇವರಿಗೆ ನುಡಿ ನಮನ ಕಾರ್ಯಕ್ರಮವು ಶನಿವಾರದಂದು ಸುಳ್ಯ ಅಂಬೆಟಡ್ಕದ ಕನ್ನಡ ಭವನದಲ್ಲಿ ನಡೆದಿದೆ.
ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಾಕಾರಿ ಸಮಿತಿ ಸದಸ್ಯ ಪ್ರೋ . ಬಾಲಚಂದ್ರ ದೀಪ ಬೆಳಗಿಸಿದರು. ಸುಳ್ಯದ ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕ ಸುಂದರ ಕೇನಾಜೆ ನುಡಿ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸುಂದರ ಕೇನಾಜೆ, ಕುಂಬ್ಳೆ ಸುಂದರ ರಾವ್ ಅವರು ಕನ್ನಡಕ್ಕೆ ಹಾಗೂ ಯಕ್ಷಗಾನಕ್ಕೆ ಕೊಟ್ಟಂತಹ ಕೊಡುಗೆ ಅಪಾರ. ಅದನ್ನು ತೂಕ ಮಾಡಲು ಸಾಧ್ಯವಿಲ್ಲ. ಅವರು ತುಂಬಾ ಆತ್ಮೀಯತೆ ಸ್ವಭಾವದವರು ಹಾಗೂ ಎಲ್ಲರ ಜೊತೆಗೆ ಆಪ್ತರಾಗಿ ಇದ್ದವರು. ಓದುವುದು, ಗ್ರಹಿಸುವುದು, ಅಭಿವ್ಯಕ್ತಿಸುವುದು ಇವರ ಒಂದು ವಾಡಿಕೆ ಆಗಿದೆ. ಇಡೀ ಕರ್ನಾಟಕದಲ್ಲೆ ಓದುವಿನ ಜೊತೆಗೆ ಅಭಿವ್ಯಕ್ತಿಸುವುದು ಎಂದರೆ ಅದು ಕುಂಬ್ಳೆಯವರು ಮಾತ್ರ. ಕರಾವಳಿಯಲ್ಲಿ ಕಲೆಯನ್ನು ಜೀವಂತವಾಗಿಡಿಸಿ, ಅಪಾರ ಕೊಡುಗೆ ನೀಡಿ. ಇಂದು ಇಹಲೋಕ ತ್ಯಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಂತಹ ಕಲಾವಿದರು ಇನ್ನು ಹುಟ್ಟಿ ಬರಲಿ ಎಂದು ಆಶಿಸಿದರು. ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಚಂದ್ರಶೇಖರ ಪೇರಾಲ್, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ ಡಾ. ಉಮ್ಮರ್ ಬೀಜದಕಟ್ಟೆ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ದಾಮೋದರ .ಕೆ , ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಲ ಮತ್ತು ಚಂದ್ರಮತಿ .ಕೆ , ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧಿಕಾರಿ ದಯಾನಂದ ಆಳ್ವ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.