ನ್ಯೂಸ್ ನಾಟೌಟ್ : ಜಗತ್ತಿನಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗಿನ್ನಿಸ್ ದಾಖಲೆಗೆ ಪಾತ್ರವಾಗಿರುವುದನ್ನು ನೀವೆಲ್ಲಾ ಕೇಳಿರುತ್ತೀರಿ. ಆದರೆ ಇಲ್ಲೊಬ್ಬನಿದ್ದಾನೆ ವಿಶ್ವದಲ್ಲೇ ಅತೀ ಕುಳ್ಳ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು ಎಲ್ಲಾ ಕುಳ್ಳಂದಿರ ಗಿನ್ನಿಸ್ ರೆಕಾರ್ಡ್ ದಾಖಲೆ ಮುರಿದು ವಿಶ್ವ ದಾಖಲೆ ಮಾಡಿದ್ದಾನೆ.
ವಿಶ್ವದ ಅತಿ ಕುಳ್ಳ:
‘ಅಫ್ಸಿನ್ ಘದೆರ್ಜಾಡ್’ ಎಂಬ ಯುವಕ ಇರಾನ್ ನ ಪಶ್ಚಿಮ ಅಜೆರ್ಬಿಜನ್ ಪ್ರದೇಶದ ಬುಕನ್ ಕೌಂಟಿ ಎಂದ ಪುಟ್ಟ ಹಳ್ಳಿಯವನಾಗಿದ್ದು, ಕುರ್ದಿಶ್ ಹಾಗೂ ಪರ್ಶಿಯನ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡಬಲ್ಲ. ಇದೀಗ ಆತ ಕುಬ್ಜತೆಯಲ್ಲಿ ವಿಶ್ವದ ಅತೀ ಕುಳ್ಳ ವ್ಯಕ್ತಿ ಎಂದು ಗುರುತಿಸಿ ಗಿನ್ನಿಸ್ ದಾಖಲೆ ಪಡೆದಿದ್ದಾನೆ.
ಘದೆರ್ಜದ್ ಗೆ 20 ವರ್ಷ:
65.24 ಸೆಂಟಿ ಮೀಟರ್ ಅಂದರೆ 2 ಅಡಿ 1.68 ಎಂದು ದುಬೈನಲ್ಲಿ ಡಿಸೆಂಬರ್ 13 ರಂದು ಅಳತೆ ಮಾಡಲಾಗಿತ್ತು. ಗಿನ್ನೆಸ್ ವಿಶ್ವ ದಾಖಲೆಯ ಸಂಸ್ಥೆ ಕೂಡ ಈ ವಿಚಾರವನ್ನು ಘೋಷಣೆ ಮಾಡಿತ್ತು. ಈ ಹಿಂದೆ ಈ ದಾಖಲೆ ಹೊಂದಿದ್ದ ವ್ಯಕ್ತಿಗಿಂತ 7 ಸೆಂಟಿ ಮೀಟರ್ ನಷ್ಟು ಕಡಿಮೆ ಎತ್ತರ ಹೊಂದಿದ್ದರಿಂದ ಅಫ್ಸಿನ್ ಇಸ್ಮಾಯಿಲ್ ಘದೆರ್ಜದ್ ಅವರು ಅತ್ಯಂತ ಕುಳ್ಳ ವ್ಯಕ್ತಿ ಎಂದು ಗುರುತಿಸಿದ್ದಾರೆ. 20 ವರ್ಷದ ಅಫ್ಸಿನ್ ಇಸ್ಮಾಯಿಲ್ ಘದೆರ್ಜದ್ ಈಗ 65.24 ಸೆಂಟಿಮೀಟರ್ ಎತ್ತರದೊಂದಿಗೆ ವಿಶ್ವದ ಅತ್ಯಂತ ಕುಬ್ಜ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಹಾಗೆಯೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಇದುವರೆಗೆ ದಾಖಲಿಸಿದ ಅತ್ಯಂತ ಕಿರಿಯ ವ್ಯಕ್ತಿಗಳ ಪೈಕಿ ಅಫ್ಸಿನ್ ನಾಲ್ಕನೇಯವರು. ತಮ್ಮ ಈ ಕುಬ್ಜತೆಯನ್ನು ದಾಖಲಿಸುವ ಸಲುವಾಗಿ ಅಫ್ಸಿನ್ ಇರಾನ್ನಿಂದ ದುಬೈಗೆ ಆಗಮಿಸಿದ್ದರು. ಅಲ್ಲಿ ಅವರ ಸರಿಯಾದ ಎತ್ತರವನ್ನು ದಾಖಲಿಸುವ ಸಲುವಾಗಿ 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಅಳತೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಅಫ್ಸಿನ್ ಅವರು ಹುಟ್ಟುವಾಗ ಕೇವಲ 700 ಗ್ರಾಂ ತೂಕವಿದ್ದರು. ಅಲ್ಲದೇ ಇಲ್ಲಿಯವರೆಗೆ 6.5 ಕೆಜಿಯವರೆಗೆ ಬೆಳೆದಿದ್ದಾರೆ ಎಂದು ತಿಳಿಸಿದ್ದಾರೆ. ತಮ್ಮ ಕುಬ್ಜತೆಯಿಂದಾಗಿ ಅಫ್ಸಿನ್ ಅವರಿಗೆ ಎಲ್ಲರಂತೆ ಸಾಮಾನ್ಯ ಬದುಕು ಸಾಧ್ಯವಾಗುತ್ತಿಲ್ಲ. ತಮ್ಮ ಈ ಸಣ್ಣ ಗಾತ್ರದಿಂದಾಗಿ ಅವರಿಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಇದು ಅವರ ಶಿಕ್ಷಣದ ಮೇಲೆ ನಕರಾತ್ಮಕ ಪರಿಣಾಮ ಬೀರಿತು. ನಿರಂತರ ಚಿಕಿತ್ಸೆ ಹಾಗೂ ದೈಹಿಕ ಅಸಮರ್ಥತೆಯಿಂದ ಶಿಕ್ಷಣ ನಿಲ್ಲಿಸಲು ಪ್ರಮುಖ ಕಾರಣವಾಗಿದೆ. ಮತ್ತು ಇದರ ಹೊರತಾಗಿ ಆತನಿಗೆ ಯಾವುದೇ ಮಾನಸಿಕ ಸಮಸ್ಯೆಗಳು ಇಲ್ಲ ಎಂದು ಅಫ್ಸಿನ್ ತಂದೆ ಇಸ್ಮಾಯಿಲ್ ಘದೆರ್ಜಾದ್ ತಿಳಿಸಿದ್ದಾರೆ.