ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ ಉಡುಪಿಯ ಮಲ್ಪೆ ಬೀಚ್ ನಲ್ಲಿ ಉದ್ಘಾಟನೆಯಾಗಿತ್ತು. ಆ ಸೇತುವೆ ಉದ್ಘಾಟನೆಯಾದ 48 ಗಂಟೆಗಳ ಅವಧಿಯಲ್ಲೇ ಸಮುದ್ರದ ಅಲೆಗಳ ದೊಡ್ಡ ಹೊಡೆತಕ್ಕೆ ಸಿಲುಕಿ ಛಿದ್ರವಾಗಿತ್ತು. ಇದೀಗ ಆ ಸೇತುವೆಯನ್ನು ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸಹಜವಾಗಿಯೇ ಉಡುಪಿಗೆ ಪ್ರವಾಸ ತೆರಳುವ ಪ್ರವಾಸಿಗರು ಖುಷಿಯಾಗಿದ್ದಾರೆ.
ಉಡುಪಿಯ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ತೇಲುವ ಸೇತುವೆ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಛಿದ್ರವಾಗಿತ್ತು. ಆ ಕಾರಣದಿಂದ ತೇಲುವ ಸೇತುವೆ ಬಳಿ ಪ್ರವಾಸಿಗರ ಪ್ರವೇಶಕ್ಕೆ ಬಂದ್ ಮಾಡಲಾಗಿತ್ತು. ಕೆಲವು ಸಮಯಗಳ ಬಳಿಕ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ಇದೀಗ ಮತ್ತೆ ಮರು ನಿರ್ಮಾಣವಾಗಲಿದೆ. ತಜ್ಣರು ಪರಿಶೀಲನೆ ನಡೆಸಿದ ಬಳಿಕವಷ್ಟೇ ನಿರ್ಮಾಣ ಮಾಡಲಾಗುತ್ತದೆ ಎಂದು ವರದಿಯಾಗಿದೆ.