ನ್ಯೂಸ್ ನಾಟೌಟ್ : ಪ್ರವಾಸಿ ತಾಣ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ರಜೆಯ ಮಜಾ ಅನುಭವಿಸಲು ಒತ್ತಡದಿಂದ ಹೊರಗೆ ಬರಲು ಪ್ರತಿಯೊಬ್ಬರು ಪ್ರವಾಸ ಹೋಗುವುದನ್ನೇ ಎದುರು ನೋಡುತ್ತಿರುತ್ತಾರೆ. ಪ್ರವಾಸ ಅಂದಾಗ ಹಲವಾರು ತಾಣಗಳು ನಮಗೆ ನೆನಪಿಗೆ ಬರುತ್ತದೆ. ಅಂತಹ ಮೋಸ್ಟ್ ಬ್ಯುಟಿಫುಲ್ ತಾಣಗಳಲ್ಲಿ ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗು ಕೂಡ ಒಂದು.
ಹೌದು, ಮಡಿಕೇರಿ ಸುತ್ತಮುತ್ತಲಿನ ಮಂಜಿನ ಹನಿಗಳು, ಚುಮುಚುಮು ಚಳಿ, ಹಸಿರ ಸಿರಿಯಲ್ಲಿ ಮಿಂದೇಳುವುದೇ ಒಂದು ವಿಶೇಷ ಅನುಭವ. ಆದರೆ ಕೆಲವು ದಿನಗಳ ಹಿಂದೆ ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ಅವಕಾಶ ಇರಲಿಲ್ಲ. ಇದರಿಂದ ಅವರು ಸಾಕಷ್ಟು ನಿರಾಶೆ ಅನುಭವಿಸಿದ್ದರು. ಅಲ್ಲಿಗೆ ತೆರಳುವ ಹಾದಿಯಲ್ಲಿದ್ದ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿತ್ತು. ಇದರಿಂದ
ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಪರ್ಯಾಯ ಸೇತುವೆ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.