ನ್ಯೂಸ್ ನಾಟೌಟ್ : ವೈದ್ಯರೆಂದರೆ ಹಗಲಿರುಳು ಜನತೆಯ ಆರೋಗ್ಯಕ್ಕಾಗಿ ಶ್ರಮಿಸುವ ಪ್ರತ್ಯಕ್ಷ ದೇವರು.ಆರೋಗ್ಯ ಸಮಸ್ಯೆ ಎದುರಾದಾಗ ನಾವು ವೈದ್ಯರಲ್ಲಿಗೆ ಹೋಗುತ್ತೇವೆ. ವೈದ್ಯರು ಸಮಸ್ಯೆಯ ಶಮನಕ್ಕೆ ಔಷಧಿ ಚೀಟಿ ಬರೆದು ಕೊಡುತ್ತಾರೆ.ಆದರೆ ಕೆಲವೊಂದು ವೈದ್ಯರು ಬರೆದು ಕೊಡುವ ಔಷಧ ಚೀಟಿಯನ್ನು ಓದುವುದೇ ಒಂದು ಸವಾಲು.ಸಾಮಾನ್ಯರಿಗಂತು ಓದುವುದೇ ಅಸಾಧ್ಯ.ಮೆಡಿಕಲ್ ನವರು ಅದು ಹೇಗೆ ಓದಿ ಔಷಧಿ ನೀಡುತ್ತಾರೋ ಎಂಬ ಮಾತನ್ನು ಜನರಾಡುವುದಿದೆ.ಅದನ್ನು ಸುಲಭವಾಗಿಸಲು ಇನ್ಮುಂದೆ ಗೂಗಲ್ ನೆರವಾಗಲಿದೆ.ಅಕ್ಷರ ಹೇಗಿದ್ದರೂ ಕೂಡಲೇ ಯಾವ ಅಕ್ಷರ ಎಂದು ಇದು ಹೇಳಬಲ್ಲುದು.
ಏನಿದು ತಂತ್ರಜ್ಞಾನ:
ಅಭಿವೃದ್ದಿ ಪಡಿಸಿದ ಈ ತಂತ್ರಜ್ಞಾನದಿಂದ ಸುಲಭವಾಗಿ ವೈದ್ಯರ ಚೀಟಿಯನ್ನು ಓದಬಹುದು.ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಅಪ್ಲಿಕೇಶನ್ ಸಹಾಯದಿಂದ ಗೂಗಲ್ ಲೆನ್ಸ್ ಬಳಸಿಕೊಂಡು ವೈದ್ಯರ ಚೀಟಿಯನ್ನು ಓದುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಗೂಗಲ್ ವಿವರಿಸುತ್ತದೆ
ವೈದ್ಯರು ಬರೆದ ಚೀಟಿಯನ್ನು ಓದಲೆಂದೇ ಗೂಗಲ್ ಫಾರ್ ಇಂಡಿಯಾ ಈವೆಂಟ್ನಲ್ಲಿ ಎಐ ಫಾರ್ ಇಂಡಿಯಾ ಮೂಲಕ, ನೂತನ ತಂತ್ರಜ್ಞಾನದ ಮೂಲಕ, ಕ್ಲಿಷ್ಟವಾದ ಮಾಹಿತಿಯನ್ನು ಡಿಕೋಡ್ ಮಾಡಿ, ವಿವರಿಸಲು ಗೂಗಲ್ ನೆರವಾಗಲಿದೆ.ಗೂಗಲ್ ಈವೆಂಟ್ನಲ್ಲಿ ನೂತನ ತಂತ್ರಜ್ಞಾನವನ್ನು ಪ್ರಸ್ತುತಪಡಿಸಲಾಗಿದೆ. ಈಗಾಗಲೇ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಿದ ಬಳಿಕ, ಸಾರ್ವಜನಿಕರ ಬಳಕೆಗೆ ಒದಗಿಸಲಾಗುತ್ತದೆ.