ನ್ಯೂಸ್ ನಾಟೌಟ್ : ವಾಹನಗಳನ್ನು ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು. ಅದು ಅಪಘಾತಕ್ಕೆ ಕಾರಣವಾಗುತ್ತದೆ ಎಂಬ ಸ್ಲೋಗನ್ ಕೇಳಿದ್ದೀರಿ.ಇಲ್ಲೊಂದು ಕಡೆ ಕಾರಲ್ಲಿದ್ದ ಮೊಬೈಲ್ ಫೋನ್ ಕಾರು ಅಪಘಾತವಾದ ಸಂದರ್ಭದಲ್ಲಿ ಜೋಡಿಯ ಪ್ರಾಣ ಉಳಿಸಿದ ಘಟನೆ ನಡೆದಿದೆ.
ಏನಿದು ಘಟನೆ?
ಹೌದು, ಇದು ಆಶ್ಚರ್ಯವಾದರೂ ಸತ್ಯ.ಮೊಬೈಲ್ ನಲ್ಲಿರುವ ನೂತನ ಫೀಚರ್ ಅಮೆರಿಕದಲ್ಲಿ ಜೋಡಿಯೊಂದರ ಪ್ರಾಣ ಉಳಿಸಿದೆ. ಕ್ಲಾಯ್ ಫೀಲ್ಡ್ಸ್ ಮತ್ತು ಕ್ರಿಸ್ಟಿನ್ ಝೆಲಾಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ 300 ಅಡಿ ಆಳದ ಕಣಿವೆಗೆ ಬಿದ್ದಿತ್ತು.ಕಾರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು,ಅದರೊಳಗಿಂದ ಜೋಡಿ ಹೊರಗಡೆ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ತುರ್ತು ಕರೆ ಮಾಡಲು ಕೂಡ ಅವಕಾಶ ದೊರಕಿಲ್ಲ.
ಬದುಕಿದ್ದೇ ಪವಾಡ:
ಜೋಡಿ ಬಳಿಯಲ್ಲಿದ್ದ ಮೊಬೈಲ್ ಪವಾಡವಂಬಂತೆ ಕೆಲಸ ನಿರ್ವಹಿಸಿದೆ. ಈ ಜೋಡಿ ಬದುಕುವ ಸಾಧ್ಯತೆ ಕಡಿಮೆ ಎನ್ನುವ ಸಂದರ್ಭದಲ್ಲಿ ಕೈಯಲ್ಲಿದ್ದ ಮೊಬೈಲ್ ಅದಾಗಲೇ ತುರ್ತು ಸೇವೆಗೆ ಸಂದೇಶ ರವಾನಿಸಿತ್ತು.
ಆ್ಯಪಲ್ ಐಫೋನ್ 14:
ಕ್ರಿಸ್ಟಿನ್ ಬಳಿಯಲ್ಲಿತ್ತು ಆ್ಯಪಲ್ ಐಫೋನ್ 14, ಇದು ಕಾರು ಅಪಘಾತಕ್ಕೀಡಾಗಿರುವುದನ್ನು ಪತ್ತೆ ಹಚ್ಚಿತ್ತು. ಬಳಿಕ ಕೂಡಲೇ ತುರ್ತು ಸೇವೆಗೆ ಸಂದೇಶ ಕಳುಹಿಸಿತ್ತು!.ಅದಾಗಿ ಅರ್ಧ ಗಂಟೆಯೊಳಗೆ ತುರ್ತು ರಕ್ಷಣಾ ತಂಡ ಹೆಲಿಕಾಪ್ಟರ್ನಲ್ಲಿ, ಕಾರು ಅಪಘಾತವಾದ ಸ್ಥಳಕ್ಕೆ ಧಾವಿಸಿ, ಜೋಡಿಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದೆ.