ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಗಣಿಗಾರಿಕೆ ಮತ್ತು ಮರಳು ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆದಿತ್ತು. ಅವರ ವಾಹನಗಳನ್ನು ಅಧಿಕಾರಿಗಳು ಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆದರೆ ಇದೀಗ ಸುಳ್ಯ ವಲಯದಲ್ಲಿ ಅಧಿಕಾರಿಗಳಿಂದ ದಿಢೀರ್ ಗಣಿಗಾರಿಕೆ ಮತ್ತು ಮರಳು ದಾಸ್ತಾನು ಘಟಕಗಳ ಮೇಲೆ ದಾಳಿ ನಡೆದಿದೆ.
ಡಿ.19 ಸುಳ್ಯ ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ಸುಳ್ಯದ ಮೇನಾಲದಲ್ಲಿ ನೂರಕ್ಕೂ ಹೆಚ್ಚು ಅಧಿಕ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮೇನಾಲ ಬಳಿ ರಸ್ತೆ ಪರಂಬೋಕು ಸ್ಥಳದಲ್ಲಿ ಮರಳು ದಾಸ್ತಾನು ಮಾಡಲಾಗಿರುವ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಡಿ.18 ರಂದು ವಶಪಡಿಸಿಕೊಂಡಿದ್ದಾರೆ. ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ಹಾಗೂ ಮೆಸ್ಕಾಂ ಎ.ಇ. ಸುಪ್ರೀತ್ ಮರಳು ದಾಸ್ತಾನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.