ನ್ಯೂಸ್ ನಾಟೌಟ್ : ಆರೋಗ್ಯ ಚೆನ್ನಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತಾರೆ. ಆದರೆ ಇನ್ನೂ ಕೆಲವರು ಸಿಕ್ಕಿದ್ದನ್ನೆಲ್ಲ ತಿಂದು, ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಕೆಲವು ಆಹಾರಗಳಿಂದ ಏನೆಲ್ಲ ಪ್ರಯೋಜನ ಅನ್ನುವುದನ್ನು ಕನಿಷ್ಟ ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡುವುದಿಲ್ಲ. ಎಲ್ಲ ಗೊತ್ತಾಗುವಷ್ಟರಲ್ಲಿ ಅವರ ಆರೋಗ್ಯವೇ ಹಳಿ ತಪ್ಪಿ ಹೋಗಿರುತ್ತದೆ. ಹೀಗಾಗಿ ಕೆಲವೊಂದು ಆಹಾರ ಅಥವಾ ತಂಪು ಪಾನೀಯಗಳನ್ನು ಸೇವಿಸಬಾರದು. ಅಂತಹ ಪಾನೀಯಗಳಲ್ಲಿ ‘ಡಯಟ್ ಸೋಡಾವು ಕೂಡ ಒಂದಾಗಿದೆ. ಇದು ದೇಹಕ್ಕೆ ಮಾರಕ ಕೂಡ. ಇದರಿಂದ ದೇಹಕ್ಕೆ ಹಲವು ರೀತಿಯ ತೊಂದರೆ ಆಗುತ್ತದೆ ಅನ್ನುವ ವರದಿ ಹೊರಬಿದ್ದಿದೆ.
ಪ್ರತಿದಿನ ಈ ಸೋಡಾ ಮತ್ತು ಡಯಟ್ ಸೋಡಾ ಕುಡಿದರೆ ದೇಹಕ್ಕೆ ಹಾನಿಕಾರಕ . ಆ ಸೋಡಾದಲ್ಲಿ ಗ್ಯಾಸ್ ತುಂಬಿರುತ್ತದೆ. ಹಾಗಾಗೀ ಪ್ರತಿದಿನ ಕುಡಿದರೆ ಆರೋಗ್ಯ ಕೆಡಬಹುದು. ಆದರೆ ಕೆಲವೊಂದು ಬಾರಿ ಆರೋಗ್ಯ ಸಮಸ್ಯೆ ಇದ್ದಲ್ಲಿ ಸೋಡಾ ಕುಡಿದರೆ ಆರೋಗ್ಯ ಸರಿ ಹೋಗುವ ಸಂಭಾವನೆ ಇದೆ.
ಸೋಡಾದ ಬದಲು ದೇಹಕ್ಕೆ ತಂಪು ಪಾನೀಯಗಳು ಕುಡಿದರೆ ತುಂಬಾ ಒಳ್ಳೆಯದು. ಡಯಟ್ ಸೋಡಾದಲ್ಲಿ ಕೃತಕ ಸ್ವೀಟನರ್ಸ್ ಇರುತ್ತದೆ. ಹಾಗಾಗೀ ಅದು ಸಿಹಿ ಆಗಿರುತ್ತದೆ. ಆದರೆ ಅದಕ್ಕೆ ಸಿಹಿ ಬರಲು ಕೃತಕ ಸ್ವೀಟನರ್ಸ್ ಗಳನ್ನು ಹಾಕುತ್ತರೆ. ಇದು ಯಾರಿಗೂ ತಿಳಿದಿರುವುದಿಲ್ಲ. ಎಲ್ಲರೂ ಸಕ್ಕರೆ ಎಂದು ಅಂದು ಕೊಂಡಿರುತ್ತಾರೆ. ನಿಜಾವಾದ ಸಿಹಿ ತಿಂದಾಗ ಗೊತ್ತಾಗುತ್ತೆ ಅದಕ್ಕೆ ಇರುವ ವ್ಯತ್ಯಾಸ.
ಡಯಟ್ ಸೋಡಾ ಕುಡಿಯುವವರು ನಿಜವಾದ ಸಿಹಿ ತಿಂದಾಗ ದೇಹದಲ್ಲಿ ಬ್ಲಡ್ ಶುಗರ್ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವುದಿಲ್ಲ. ಅದರಲ್ಲಿ ಸಿಹಿ ರುಚಿ ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದ ಬ್ಲಡ್ ಶುಗರ್ ಇಳಿಕೆಯಾಗುತ್ತದೆ. ಕಾರ್ಬೋಹೈಡ್ರೇಟ್ ಸೇವಿಸದೇ ಇದ್ದಲ್ಲಿ ಬ್ಲಡ್ ಶುಗರ್ ಪ್ರಮಾಣ ಕಡಿಮೆಯಾಗಿ ಹಸಿವು ಮತ್ತು ಸಿಹಿ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಇದು ಕೃತಕ ಸಿಹಿ ಮೆದುಳಿದ ರಿವಾರ್ಡ್ ಸೆಂಟರ್ ಅನ್ನೇ ನಿಲ್ಲಿಸಬಹುದು. ಇದರ ಪರಿಣಾಮ ಕ್ಯಾಲೋರಿಯುಕ್ತ ಸಿಹಿ ಪದಾರ್ಥಗಳಿಗಾಗಿ ಹಾತೊರೆಯುವಂತಾಗುತ್ತದೆ. ಹಾಗಾಗಿ ಡಯಟ್ ಸೋಡಾವನ್ನು ಅದಷ್ಟು ಕಡಿಮೆ ಮಾಡಿ. ಅಪರೂಪಕ್ಕೊಮ್ಮೆ ಸೇವಿಸಿ. ಪ್ರತಿದಿನ ಸೇವಿಸುವ ಹವ್ಯಾಸ ಬೆಳೆಸಿಕೊಳ್ಳಬೇಡಿ.