ನ್ಯೂಸ್ ನಾಟೌಟ್: ಜೀವನದಲ್ಲಿ ಎಲ್ಲವು ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಇದಕ್ಕಾಗಿಯೇ ಬಹುತೇಕ ಜನರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮುಂದೇನಾದರೂ ಅಪಾಯ ಇದೆಯಾ? ಅದಕ್ಕೊಂದು ಪರಿಹಾರ ಸೂಚಿಸುವಿರಾ? ಎಂದು ಜ್ಯೋತಿಷಿಗಳ ಹಿಂದೆ ಬೀಳುವುದನ್ನು ನೋಡಿದ್ದೇವೆ.
ವೃತ್ತಿ ಜೀವನದಲ್ಲಿ, ವ್ಯಾಪಾರ, ವ್ಯವಹಾರದಲ್ಲಿ ಉತ್ತಮವಾಗಬೇಕಾದರೆ ವಿವಿಧ ತರಹದ ಹರಳನ್ನು ಧರಿಸಬೇಕು ಎಂದು ಹೇಳುತ್ತಾರೆ. ಆದ್ರೂ ನೀವು ಬರೀ ಬೆಳ್ಳಿ ಉಂಗುರ ಧರಿಸುವುದರಿಂದ ಹಲವು ಪ್ರಯೋಜನೆಗಳನ್ನು ಪಡೆಯಬಹುದು ಅನ್ನುವುದು ನಿಮಗೇನಾದರೂ ಗೊತ್ತಾ? ಇದರ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ನೀವು ಚಿನ್ನ , ವಜ್ರ, ಹವಳವನ್ನು ಮುಂತಾದ ನವರತ್ನಗಳನ್ನು ಧರಿಸಿದರೇ ಮಾತ್ರ ಅದೃಷ್ಟ ಸಿಗುತ್ತದೆ ಎಂದು ಭಾವಿಸಬೇಡಿ. ನೀವು ಸಾಧಾರಣ ಬೆಳ್ಳಿ ಉಂಗುರವನ್ನು ಧರಿಸಿದರೆ ಸಾಕು ಜೀವನಕ್ಕೆ ಬೇಕಾದ ಎಲ್ಲಾ ಅದೃಷ್ಟ ತಂದುಕೊಡುತ್ತದೆ. ಬೆಳ್ಳಿ ಉಂಗುರ ಧರಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ವೃದ್ಧಸುತ್ತದೆ. ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಗುರು ಮತ್ತು ಚಂದ್ರನ ಪ್ರಭಾವ ಬೆಳ್ಳಿಯ ಮೇಲೆ ಉತ್ತಮವಾಗಿರುವುದರಿಂದ, ಬೆಳ್ಳಿ ಉಂಗುರ ಧರಿಸೋದು ತುಂಬಾ ಉತ್ತಮ ಅಂತಾ ಹೇಳುತ್ತಾರೆ. ಹೆಚ್ಚಾಗಿ ಬೆಳ್ಳಿ ಉಂಗುರವನ್ನ ಕಿರುಬೆರಳಿನಲ್ಲಿ ಧರಿಸಲಾಗುತ್ತದೆ.
ಬೆಳ್ಳಿಯು ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಕಫ, ಪಿತ್ತ, ವಾತ ಸಮಸ್ಯೆ ನಿವಾರಣೆಗೂ ಸಹಕಾರಿ. ಅದಕ್ಕಾಗಿಯೇ ಸಾಮಾನ್ಯ ಜೀವನದಲ್ಲಿ ಬೆಳ್ಳಿಗೆ ವಿಶೇಷ ಸ್ಥಾನ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಮನಸ್ಸು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸನ್ನು ತೀಕ್ಷ್ಣಗೊಳಿಸುತ್ತದೆ. ಜಾತಕದಲ್ಲಿ ಚಂದ್ರನ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಜ್ಯೋತಿಷಿಗಳು ಬೆಳ್ಳಿಯನ್ನು ಧರಿಸುವಂತೆ ಸಲಹೆ ನೀಡುತ್ತಾರೆ. ಬೆಳ್ಳಿಯು ಶುಕ್ರನನ್ನು ಬಲಗೊಳಿಸುತ್ತದೆ. ಜ್ಯೋತಿಷಿಗಳ ಪ್ರಕಾರ, ಚಿಕ್ಕ ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರ ಧರಿಸುವುದರಿಂದ ಸಾಕಷ್ಟು ಪ್ರಯೋಜನ ಇದೆ. ಬೆಳ್ಳಿಯನ್ನು ಧರಿಸುವುದರಿಂದ, ಚಂದ್ರನ ಅಶುಭ ಪರಿಣಾಮಗಳು ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತವೆ. ಇದರಿಂದ ಮನಸ್ಸಿನ ಸಮತೋಲನ ಸಾಧ್ಯವಾಗಿ ಧನ ಪ್ರಾಪ್ತಿಯಾಗುತ್ತದೆ. ಭಾವನಾತ್ಮಕ ಸಮಸ್ಯೆ ಇರುವವರು ಬೆಳ್ಳಿ ಧರಿಸಬಾರದು. ವೃಶ್ಚಿಕ, ಮೀನ ಮತ್ತು ಕರ್ಕಾಟಕ ರಾಶಿಯವರಿಗೆ ಬೆಳ್ಳಿಯನ್ನು ಧರಿಸುವುದು ಶುಭಕರ. ಆದರೆ ಸಿಂಹ, ಧನು ರಾಶಿ ಮತ್ತು ಮೇಷ ರಾಶಿಯವರಿಗೆ ಅನುಕೂಲಕರ ಅಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಮೊದಲು ಬೆಳ್ಳಿಯ ಸರವನ್ನು ಗಂಗಾಜಲದಿಂದ ಶುದ್ಧೀಕರಿಸಿ. ಅದರ ನಂತರ ಕುತ್ತಿಗೆಗೆ ಧರಿಸಬೇಕು. ಹೀಗೆ ಮಾಡುವುದರಿಂದ ಹಾರ್ಮೋನುಗಳು ಸಹ ಸಮತೋಲನದಲ್ಲಿರುತ್ತವೆ. ಬೆಳ್ಳಿ ಉಂಗುರವನ್ನು ಧರಿಸಿ ನೀವು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ.