ನ್ಯೂಸ್ ನಾಟೌಟ್ : ಸಾವಿರಾರು ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಶಿವಲಿಂಗವು ಮಣ್ಣಿನಡಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಪೆರ್ಲದಲ್ಲಿ ನಡೆದಿದೆ.
ಸುಮಾರು ಒಂದು ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಶಿವಲಿಂಗ ಇದಾಗಿದೆ. ಬಳಿಕ ಯಾವುದೇ ಆರಾಧನೆಗಳಿಲ್ಲದೆ ಪಾಳುಬಿದ್ದಿತ್ತು. ನಿರಂತರ ಪೂಜೆ ಮಾಡದ ಕಾರಣ ನಾಡಿನ ಗ್ರಾಮಸ್ಥರಿಗೆ ಸಮಸ್ಯೆ ಎದುರಾಗಿತ್ತು. ಅನಾರೋಗ್ಯ ಮತ್ತು ಇತರ ಸಮಸ್ಯಗಳಿಂದ ಕಂಗೆಟ್ಟಿದ್ದ ಗ್ರಾಮದ ಜನರು ಇತ್ತೀಚಿಗೆ ದೈವತಜ್ಞರ ಮೂಲಕ ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದರು. ಆಗ ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೆ ಶಿವಲಿಂಗವು ಪಾಳು ಬಿದ್ದ ದೇವಸ್ಥಾನದ ಪಕ್ಕದ ಮಣ್ಣಿನಡಿಯಲ್ಲಿ ಪತ್ತೆಯಾಯಿತು.ನಂತರ ಕ್ಷೇತ್ರದ ಪುನರ್ ನವೀಕರಣವನ್ನು ಗ್ರಾಮಸ್ಥರು ಮಾಡಿದ್ದಾರೆ.