ನ್ಯೂಸ್ ನಾಟೌಟ್ : ಎಲ್ಲರಿಗೂ ಪ್ರಿಯವಾದ ಹಣ್ಣು. ಆ ಹಣ್ಣು ಕಂಡರೆ ಸಾಕು ಬಾಯಲ್ಲಿ ನೀರೂರುತ್ತದೆ. ಬಾಯಿಗೆ ಎಷ್ಟು ರುಚಿಯು ದೇಹಕ್ಕೂ ತುಂಬಾ ಒಳ್ಳೆಯದು. ಮಕ್ಕಳಿಗಂತೂ ತುಂಬಾ ಇಷ್ಟವಾದ ಹಣ್ಣು. ಅದು ಯಾವ ಹಣ್ಣು ಗೊತ್ತಾ…? ಅದು ಬೇರೆ ಯಾವ ಹಣ್ಣು ಅಲ್ಲ ಸಪೋಟಾ..
ಸಪೋಟಾ ಹಣ್ಣಿನಲ್ಲಿ ಎಂಟಿಒಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಅನೇಕ ಪೋಷಕಾಂಶಗಳಿವೆ. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳೂ ಸಮೃದ್ಧವಾಗಿವೆ. ಆರೋಗ್ಯಕ್ಕೆ ಒಳ್ಳೆಯ ಹಣ್ಣು. ಆದರೆ ಇದರ ಬೆಲೆ ದುಬಾರಿಯಲ್ಲ. ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ. ಕೆಲವರ ಮನೆಗಳಲ್ಲಿ ಸಪೋಟಾ ಹಣ್ಣಿನ ಮರಗಳನ್ನು ನೆಟ್ಟಿರುತ್ತಾರೆ. ಚಳಿಗಾಲದಲ್ಲಿ ಸಪೋಟಾ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ದೇಹದ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ವಿಟಮಿನ್ ಸಿ ಮತ್ತು ಎಂಟಿಒಕ್ಸಿಡೆಂಟ್ ಗಳಿರುವುದರಿಂದ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸಪೋಟಾ ಹಣ್ಣು ತಿನ್ನುವುದರಿಂದ ಶೀತ ಮತ್ತು ಜ್ವರವನ್ನು ದೂರಮಾಡಬಹುದು. ಶರೀರದ ಮೂಳೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ ನಂತಹ ಖನಿಜಗಳಿರುವುದರಿಂದ ಮೂಳೆ ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ಕಡಿಮೆಯಾಗುತ್ತದೆ. ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸಪೋಟಾ ಹಣ್ಣಿನಲ್ಲಿವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ನೀರಿನಲ್ಲಿ ಕುದಿಸಿಕೊಂಡು ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಬಿಪಿ ಸಮಸ್ಯೆ ಇರುವವರಿಗೂ ಕೂಡ ಉತ್ತಮ ಈ ಹಣ್ಣು. ಸಪೋಟಾ ಹಣ್ಣಿನಲ್ಲಿರುವ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡುತ್ತವೆ. ಇದು ಫೈಬರ್ ನಲ್ಲಿ ಸಮೃದ್ಧವಾಗಿದೆ. ಹಾಗಾಗಿ ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹಸಿವು ಕೂಡ ನಿಯಂತ್ರಣದಲ್ಲಿರುತ್ತದೆ. ಸಪೋಟಾ ಹಣ್ಣಿನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಇರುವುದರಿಂದ ಇದು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇದು ದೇಹದ ಒಳಗಿನಿಂದ ಚರ್ಮವನ್ನು ಪೋಷಿಸುತ್ತದೆ ಮತ್ತು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ.