ನ್ಯೂಸ್ ನಾಟೌಟ್ : ಪಕ್ಷಿಗಳು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಪಾರಿವಾಳ ಎಲ್ಲರ ಗಮನ ಸೆಳೆಯುತ್ತದೆ. ಮಕ್ಕಳಂತೂ ಪಾರಿವಾಳವನ್ನು ಕೈ ಹಿಡಿಯಲು ಪ್ರಯತ್ನಿಸುತ್ತಿರುತ್ತಾರೆ. ಹೀಗೆಯೇ ಪಾರಿವಾಳವೊಂದನ್ನು ಕೈಯಲ್ಲಿ ಹಿಡಿಯಲು ಹೋಗಿ ಮಕ್ಕಳು ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಬಾಲಕರಾದ ಸುಪ್ರೀತ್ (11) ಹಾಗೂ ಚಂದನ್ (10) ಇವರು ಬೆಂಗಳೂರಿನ ವಿಜಯಾನಂದ ನಗರದ ನಂದಿನಿ ಲೇಔಟ್ ನಲ್ಲಿ ಪಾರಿವಾಳಗಳನ್ನು ಹಿಡಿಯಲು ಎಂದು ಹೋಗಿದ್ದರು. ಆ ವೇಳೆಗೆ ವಿದ್ಯುತ್ ಹ್ಯೆಟೆನ್ಶನ್ ವೈರ್ ತಾಗಿದೆ. ಅದ್ದರಿಂದ ಮಕ್ಕಳ ಜೀವಕ್ಕೆ ಅಪಾರ ಹಾನಿಯಾಗಿದ್ದು, ಮೈ ಮೇಲೆ ಸುಟ್ಟು ಗಾಯಗಳಾಗಿವೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಪರಿಸ್ಥಿತಿ ಸಾವು – ಮರಣದ ನಡುವೆ ಹೋರಾಡುವಂತಾಗಿದೆ. ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.