ನ್ಯೂಸ್ ನಾಟೌಟ್: ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸರಕಾರ ವೇತನ ಹೆಚ್ಚಿಸಿ ಸಿಹಿ ಸುದ್ದಿ ನೀಡಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗೆ ಅನ್ವಯವಾಗುವಂತೆ ಹೊಸ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ಆದೇಶದ ಪ್ರಕಾರ ಗ್ರಾಮ ಪಂಚಾಯತ್ ಅಧ್ಯಕ್ಷರು 6,000 , ಉಪಾಧ್ಯಕ್ಷರು ರೂ. 4,000 ಹಾಗೂ ಸದಸ್ಯರು 2,000 ರೂ. ವನ್ನು ಮಾಸಿಕ ವೇತನವಾಗಿ ಪಡೆಯಲಿದ್ದಾರೆ ಎಂದು ಸರಕಾರದ ಜಂಟಿ ಕಾರ್ಯದರ್ಶಿ (ಪಂ.ರಾಜ್) ಎಂ.ಎನ್.ಬ್ಯಾನೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಕ್ರಮವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು 3,000 ರೂ. ಉಪಾಧ್ಯಕ್ಷರು 2000 ರೂ. ಹಾಗೂ ಸದಸ್ಯರು 1,000 ರೂ. ಅನ್ನು ಪಡೆಯುತ್ತಿದ್ದಾರೆ.