ನ್ಯೂಸ್ ನಾಟೌಟ್ : ಎಷ್ಟೋ ಸಲ ರಕ್ತ ಸಂಬಂಧಗಳಿಗಿಂತ ಸ್ನೇಹವೇ ಮೇಲೂ ಅನಿಸುವುದಿದೆ. ಪರಿಶುದ್ಧ ಸ್ನೇಹದಲ್ಲಿ ಎಂದಿಗೂ ಕಪಟವಿರಲ್ಲ. ಆ ಸ್ನೇಹ ಬಿಳಿ ಹಾಲಿನಷ್ಟೇ ಪರಿಶುದ್ಧ, ಸ್ವಚ್ಛ ಸುಂದರ. ಕೆಲವರಲ್ಲಿ ಸ್ನೇಹವು ಹಣ- ಅಂತಸ್ತನ್ನು ಮೀರಿ ಆಳವಾಗಿ ಬೇರೂರಿರುತ್ತದೆ. ಇಂಥಹುದೇ ಒಂದು ಸ್ನೇಹದ ಕಥೆಯನ್ನು ನಾವಿಲ್ಲಿ ನಿಮಗೆ ಹೇಳುತ್ತಿದ್ದೇವೆ. ಒಂದರಲ್ಲ ಎರಡಲ್ಲ ಬರೋಬ್ಬರಿ 80 ವರ್ಷದ ಬಳಿಕ ಇಬ್ಬರು ಗೆಳತಿಯರು ಭೇಟಿಯಾಗಿದ್ದಾರೆ. ಕೇರಳದ ಪಾಲಕ್ಕಾಡ್ ಈ ಅಪೂರ್ವ ಭೇಟಿಗೆ ಸಾಕ್ಷಿಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/reel/CkaXE21j_Eo/?utm_source=ig_web_copy_link
ಕೇರಳದ ಪಾಲಕ್ಕಾಡಿನ ರಸಮಣಿ (93 ವ ) ಮತ್ತು ಪಂಜಲಿ ಕುಟ್ಟಿಯಮ್ಮ(96 ವ) ಕಳೆದ ಎಂಟು ದಶಕಗಳಿಂದ ಕಾರಣಾಂತರಗಳಿಂದ ಭೇಟಿಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಇವರಿಬ್ಬರನ್ನು ರಸಮಣಿಯವರ ಮೊಮ್ಮಗ ಮುಕಿಲ್ ಮೇನನ್ ಪರಸ್ಪರ ಭೇಟಿ ಮಾಡಿದ್ದಾರೆ. ಎಂಟು ದಶಕದ ಬಳಿಕ ಇಬ್ಬರು ವೃದ್ಧೆಯರ ಭೇಟಿಯ ವಿಡಿಯೋವನ್ನು ಮುಕಿಲ್ ದಾಖಲಿಸಿಕೊಂಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೀಕ್ಷಣೆಗೆ ಕಾರಣವಾಗಿದೆ.