ನ್ಯೂಸ್ ನಾಟೌಟ್ : ಮದುವೆಯಾಗಲು ಯುವತಿ ಹಾಗೂ ಕುಟುಂಬಸ್ಥರು ವಿರೋಧಿಸಿದ ಕಾರಣ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಮೋಹನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಸಂದರ್ಭ ಯುವಕ ಡೆತ್ ನೋಟ್ ಬರೆದಿದ್ದು, ಕತ್ತಲಲ್ಲೇ ವಿಡಿಯೋವನ್ನೂ ಮಾಡಿದ್ದಾನೆ. ಈ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?
ಮೃತ ಮೋಹನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ತನ್ನ ಗ್ರಾಮದ ಪಕ್ಕದ ಯುವತಿ ಕಾವ್ಯ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆಕೆ ಕೂಡ ಆತನನ್ನು ಪ್ರೀತಿಸುತ್ತಿದ್ದಳು.ಎರಡು ಕುಟುಂಬದವರು ಮದುವೆ ಮಾಡಲು ಅನುಮತಿ ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಯುವತಿ ಹಾಗೂ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಪ್ರೇಮಿ ಅದೇ ಯುವತಿಯ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಯುವಕನ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುತ್ತಿದ್ದಾರೆ.
೭ ಲಕ್ಷ ರೂ.ನೀಡಿದ್ದನೇ?
ಎರಡು ವರ್ಷ ಪರಸ್ಪರ ಪ್ರೀತಿ ಮಾಡಿ, ಕೊನೆ ಘಳಿಗೆ ಯುವತಿ ಮದುವೆಯಾಗಲು ಒಪ್ಪದ ಕಾರಣ ಮನನೊಂದ ಪ್ರೇಮಿ ಯುವತಿಯ ಮನೆಯ ಸಮೀಪವೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮಧ್ಯೆ ಪ್ರಿಯತಮೆಯ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಿದ್ದ. ಏಳು ಲಕ್ಷ ರೂ. ಹಣವನ್ನು ಮೋಹನ್ ಕೊಟ್ಟಿದ್ದ ಎಂದು ಹೇಳಲಾಗುತ್ತಿದೆ.