ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಮಂಡೆಕೋಲಿನ ಪುರುಷೋತ್ತಮ ಎಂಬವರಿಗೆ ಡಿ. 18 ರಂದು ಎದೆ ನೊವು ಕಾಣಿಸಿದ್ದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಶೀಲನೆ ನಡೆಸಿದ ಕೆಎಂಸಿಯ ತೀವ್ರ ನಿಗಾ ಘಟಕದ ವೈದ್ಯರು ಪುರುಷೋತ್ತಮ ಅವರು ಹೃದಯ ರೋಗಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ 1.80 ಲಕ್ಷ ರೂ ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬವಾದ ಕಾರಣ ಇನ್ನು ಹೆಚ್ಚಿನ ಚಿಕಿತ್ಸೆಗೆ ಹಣದ ಕೊರತೆ ಇದೆ. ಹೀಗಾಗಿ ಅವರ ಕುಟುಂಬ ದಾನಿಗಳ ನೆರವನ್ನು ಯಾಚಿಸಿದೆ.
ಬಡ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಪುರುಷೋತ್ತಮ ಅವರು ಪುತ್ತೂರಿನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದರು. ಪುತ್ತೂರು ತಾಲೂಕು ಮುಂಡೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರಿಗೆ ಪಿಯುಸಿ ಕಲಿಯುತ್ತಿರುವ ಮಗಳಿದ್ದಾಳೆ. ಇದೀಗ ಹಾಸಿಗೆ ಹಿಡಿದಿದ್ದರಿಂದ ಚಿಕಿತ್ಸಾ ಮೊತ್ತವನ್ನು ಭರಿಸಲು ಸಾಧ್ಯವಾಗುತ್ತಿಲ್ಲವಾದುದರಿಂದ ದಾನಿಗಳ ನೆರವು ಯಾಚಿಸಿದ್ದಾರೆ. ಈ ಬಡ ಕುಟುಂಬಕ್ಕೆ ನಿಮ್ಮಿಂದಾದ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.
ಫೋನ್ ಪೇ- 9481075233
PURUSHOTHAMA M
6042500102777301
Karnataka Bank, Puttur
IFSC Code- KARB0000604