ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಭಾರಿ ಹೆಸರುಗಳಿಸಿದೆ. ಇಲ್ಲಿನ ಪ್ರತಿಭೆಗಳು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಮಿಂಚುತ್ತಿವೆ. ಇದೀಗ ಸುಳ್ಯದ ಸೋನಾ ಅಡ್ಕಾರು ಡ್ಯಾನ್ಸ್ ಪ್ರತಿಭೆಯಾಗಿ ರಾಷ್ಟ್ರಮಟ್ಟದಲ್ಲಿ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಮರಿಕ್ಯುಂ ಡ್ಯಾನ್ಸ್ ಕ್ರೀವ್ ವತಿಯಿಂದ ಉಡುಪಿಯ ಬೆಳ್ಳಂಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಪುಥಮ ಬಹುಮಾನ ಪಡೆದಿದ್ದಾರೆ. ಇವರು ಸುಳ್ಯದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಜಾಲ್ಸೂರು ಗ್ರಾಮದ ಅಡ್ಕಾರು ಶರತ್ ಅಡಾರು ಹಾಗೂ ಶೋಭಾ ದಂಪತಿಗಳ ಪುತ್ರಿ. ತರುಣ್ ರಾಜ್ ಮಂಗಳೂರು ಸೋನಾ ಅವರಿಗೆ ಡ್ಯಾನ್ಸ್ ತರಬೇತಿ ನೀಡಿದ್ದಾರೆ.