ನ್ಯೂಸ್ ನಾಟೌಟ್: ಬಾಯಿಯಲ್ಲಿ ಹುಣ್ಣುಗಳು ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಕೆಲವರಿಗೆ ಹಲ್ಲು ಉಜ್ಜುವಾಗ ಬ್ರೇಶ್ ತಾಗಿ ಹುಣ್ಣುಗಳು ಆಗಬಹುದು. ಇನ್ನು ಕೆಲವರಿಗೆ ತಿನ್ನುವ ರಭಸದಲ್ಲಿ ಕಚ್ಚಿ ಗಾಯವಾಗುವುದುಂಟು ಮತ್ತು ನೀವು ಸೇವಿಸುವ ಆಹಾರ ಉಷ್ಣದಿಂದ ಕೊಡಿದ್ದರೆ ನಿಮಗೆ ಈ ಸಮಸ್ಯೆ ಕಾಣಬಹುದು. ಬಾಯಿಯಲ್ಲಿ ಹುಣ್ಣಗಳ ಸಮಸ್ಯ ಇದ್ದರೆ ಬಾಯಿಯಲ್ಲಿ ನೋವು ಕಾಣಿಸುತ್ತದೆ. ಅಮೇಲೆ ಯಾವುದೇ ಆಹಾರವನ್ನು ಸೇವಿಸಲು ಆಗುವುದಿಲ್ಲ . ಇತ್ತ ಮಾತನಾಡಲು ಕೂಡ ಆಗುವುದಿಲ್ಲ. ನಿಮಗೆ ಇಂತಹ ಸಮಸ್ಯೆಗಳು ಕಂಡುಬಂದರೆ ಹುಣ್ಣುಗಳ ನಿವಾರಣೆ 6 ಮನೆಮದ್ದುಗಳನ್ನು ಮಾಡಿ ಗುಣಪಡಿಸಬಹುದು.
ತುಟಿಗಳು, ಒಸಡುಗಳು, ನಾಲಿಗೆ ಮತ್ತು ಗಂಟಲಿನ ಮೇಲೆ ಹುಣ್ಣುಗಳು ಆಗುತ್ತದೆ. ಈ ಹುಣ್ಣುಗಳು ಆಹಾರ ಸೇವನೆಗೆ ತೊಂದರೆಯನ್ನುಂಟು ಮಾಡುತ್ತವೆ. ಇದನ್ನು ಮೌತ್ ಅಲ್ಸರ್ ಎಂದೂ ಕರೆಯಲಾಗುತ್ತದೆ. ಒತ್ತಡ, ಹಾರ್ಮೋನುಗಳ ಬದಲಾವಣೆಯಿಂದಾಗಿ ಬಾಯಿಯಲ್ಲಿ ಗಾಯಗಳು, ಕೆಂಪು ಬಣ್ಣದ ಗುಳ್ಳೆಗಳು ಆಗುತ್ತವೆ. ಬಾಯಿ ಹುಣ್ಣುಗಳು ನೋವಿನ ಕೆಂಪು, ಬಿಳಿ ಅಥವಾ ಹಳದಿ ಬಣ್ಣದ ಗುಳ್ಳೆಗಳಿಂದ ಕಾಣಿಸಿಕೊಳ್ಳುತ್ತವೆ. ಇದು ಹಸಿವಾಗದಂತೆ ಮಾಡಬಹುದು.
ಬಾಯಿ ಹುಣ್ಣು ಕಡಿಮೆಯಾಗಲು 6 ಸೂತ್ರ ಪಾಲಿಸಿ
ಉಗುರುಬೆಚ್ಚಗಿನ ನೀರು ಮತ್ತು ಒಂದು ಚಮಚ ಉಪ್ಪಿನೊಂದಿಗೆ ಗಾರ್ಗ್ಲಿಂಗ್ ಬೆಳಗ್ಗೆ ಎದ್ದು ಮಾಡಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತವೆ. ಉಪ್ಪು ನೀರಿನಿಂದ ಬಾಯಿಯನ್ನು ತೊಳೆಯಿರಿ. ಇದು ಹುಣ್ಣುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಲವಂಗ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದೆ. ಇದರಿಂದಾಗಿ ಲವಂಗವನ್ನು ಸೇವಿಸುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ. ಬಹುಬೇಗ ಪರಿಹಾರವನ್ನು ಪಡೆಯಲು, ಎಣ್ಣೆಯನ್ನು ನೇರವಾಗಿ ಹುಣ್ಣುಗಳಿಗೆ ಅನ್ವಯಿಸಿ. ಬಳಸಿದ ನಂತರ, ನಿಮ್ಮ ಬಾಯಿಯನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಕಿತ್ತಳೆ ರಸದಲ್ಲಿ ವಿಟಮಿನ್ ‘ಸಿ’ ಇದೆ. ಇದು ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಹಲವಾರು ಸಂಶೋಧನೆಗಳ ಪ್ರಕಾರ, ಬಾಯಿ ಹುಣ್ಣುಗಳು ವಿಟಮಿನ್ ‘ಸಿ’ ಕೊರತೆಯಿಂದ ಉಂಟಾಗಬಹುದು.
ಹುಣ್ಣುಗಳಿಗೆ ಜೇನುತುಪ್ಪವನ್ನು ಅನ್ವಯಿಸಿ ಮತ್ತು ಕೆಲವು ಗಂಟೆಗಳ ಕಾಲ ಹಾಗೆ ಮಾಡುವುದನ್ನು ಮುಂದುವರಿಸಿ. ಜೇನುತುಪ್ಪದ ಬ್ಯಾಕ್ಟೀರಿಯಾ ಬಾಯಿ ಹುಣ್ಣುಗಳನ್ನು ಗುಣಪಡಿಸುವಿಕೆಯನ್ನು ವೇಗಗೊಳಿಸುತ್ತದೆ.
ಪ್ರತಿ ಮನೆಯಲ್ಲೂ ತೆಂಗಿನ ಎಣ್ಣೆ ಇದ್ದೇ ಇರುತ್ತದೆ. ಇದು ಗುಣಪಡಿಸುವ ಸಾಮರ್ಥ್ಯಗಳನ್ನು ಹೊಂದಿದೆ. ಮಲಗುವ ಮೊದಲು ನೇರವಾಗಿ ಹುಣ್ಣುಗಳ ಮೇಲೆ ಎಣ್ಣೆಯನ್ನು ಅನ್ವಯಿಸಿ. ತೆಂಗಿನ ಎಣ್ಣೆಯಿಂದ ನೈಸರ್ಗಿಕವಾಗಿ ಚಿಕಿತ್ಸೆ ನೀಡಬಹುದು.
ಅರಿಶಿನದಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿವೆ. ಸೋಂಕುಗಳ ವಿರುದ್ಧ ಹೋರಾಡುವುದರ ಜೊತೆಗೆ ಬಾಯಿ ಹುಣ್ಣು ನೋವು ಮತ್ತು ಉರಿಯೂತ ಕಡಿಮೆ ಮಾಡಲು ಅರಿಶಿನ ಅತ್ಯುತ್ತಮವಾಗಿದೆ.