ನ್ಯೂಸ್ ನಾಟೌಟ್ : ಇದು 5ಜಿ ಮೊಬೈಲ್ ದುನಿಯಾ. ಯಾರ ಹತ್ರ ನೋಡಿದ್ರೂ ಮೊಬೈಲ್ ಇದ್ದೇ ಇದೆ. ಬಹುಶಃ ಇಂದಿನ ದಿನಗಳಲ್ಲಿ ಮೊಬೈಲ್ ಇಲ್ಲದವರೇ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರಲ್ಲೂ ಆ್ಯಂಡ್ರಾಯ್ಡ್ ಫೋನ್ ಕಾಣಬಹುದು. ಅಷ್ಟೇ ಯಾಕೆ ಈಗ ತಾನೆ ಹುಟ್ಟಿದ ಮಕ್ಕಳಿಗೂ ಊಟ ಮಾಡಿಸುವುದಕ್ಕೆ ಮೊಬೈಲ್ ಬೇಕೇ ಬೇಕು. ಕೆಲವು ಮಕ್ಕಳಂತೂ ಮೊಬೈಲ್ಗೇ ದಾಸರಾಗಿರುತ್ತಾರೆ. ಅವರನ್ನು ಹೇಗಪ್ಪ ಮೊಬೈಲ್ ಸಹವಾಸದಿಂದ ಬಿಡಿಸುವುದು ಎಂದು ಪೋಷಕರು ಚಿಂತಾಕ್ರಾಂತರಾಗಿರುತ್ತಾರೆ. ಅಂಥಹವರಿಗಾಗಿ ನಾವಿಲ್ಲಿ ಒಂದಷ್ಟು ಟಿಪ್ಸ್ ನೀಡಿದ್ದೇವೆ. ನಿಮ್ಮ ಮಕ್ಕಳು ಮೊಬೈಲ್ ಚಟದಿಂದ ಹೇಗೆ ಹೊರ ಬರುವುದು ಅನ್ನುವುದನ್ನು ಹೇಳಿದ್ದೇವೆ. ಮನೆಯಲ್ಲಿ ಪ್ರಯತ್ನಿಸಿ ನೋಡಬಹುದು.
ಮಗುವಿಗೆ ಮೊಬೈಲ್ ಫೋನ್ ತೋರಿಸುವುದನ್ನು ಪೋಷಕರು ಮೊದಲು ನಿಲ್ಲಿಸಬೇಕು. ಇಲ್ಲದಿದ್ದರೆ ಅದೇ ಅಭ್ಯಾಸವಾಗಿ ಬಿಡುತ್ತದೆ. ಮೊಬೈಲ್ ನಲ್ಲಿ ವಿಡಿಯೋ ತೋರಿಸುತ್ತಾ ತಿಂಡಿ ತಿನ್ನಿಸಬಾರದು. ಸ್ಮಾರ್ಟ್ ಫೋನ್ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ಮಾರ್ಟ್ ಫೋನ್ ಮೆದುಳಿನ ಬೆಳವಣಿಗೆ ನಿಧಾನಗೊಳಿಸುತ್ತದೆ. ಅಲ್ಲದೇ ಬೇರೆ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತವೆ. ಮಕ್ಕಳು ಮೊಬೈಲ್ ಅನ್ನು ಬಳಕೆ ಮಾಡ್ತಾ ಇದ್ದರೆ ಹೊರಗಿನ ಅರಿವು ಕಡಿಮೆ ಆಗುತ್ತದೆ. ಯಾರ ಜೊತೆಗೂ ಬೆರೆಯುವುದಿಲ್ಲ. ದೈಹಿಕ ವ್ಯಾಯಾಮದ ಕೊರತೆ ಮಗುವಿನ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಅದಕ್ಕಿಂತ ಹೊರಗೆ ಆಟ ಆಡಿದರೆ ತುಂಬಾ ಒಳ್ಳೆಯದು. ಆರೋಗ್ಯಕ್ಕೆ ವ್ಯಾಯಾಮ ಸಿಗುತ್ತದೆ.
ಮಗುವಿನ ಎದುರು ಮೊಬೈಲ್ ಒತ್ತುವುದನ್ನು ಕಡಿಮೆ ಮಾಡಬೇಕು . ಮೊಬೈಲ್ ನೋಡಲು ಬಿಡಬಾರದು. ಇಲ್ಲದಿದ್ದಲ್ಲಿ ಆಡಿಯೋ ಮಾತ್ರ ಕೇಳಿಸಬೇಕು. ಮಕ್ಕಳ ಜೊತೆಗೆ ಹೆಚ್ಚು ಕಾಲ ಕಳೆಯಬೇಕು. ಹಾಡುಗಳನ್ನು ಹೇಳಿಕೊಡಬೇಕು, ಆಟ ಆಡಿಸಬೇಕು. ತಂದೆ – ತಾಯಿ ಜೊತೆ ಸೇರಿ ಕಥೆ ಹೇಳುವುದು ಹೀಗೆ ಮಕ್ಕಳ ಜೊತೆ ಬೆರೆಯಬೇಕು. ಮಕ್ಕಳನ್ನು ಒಂದು ಸೈಡ್ ಬಿಟ್ಟು ತಾವು ಮೊಬೈಲ್ ನೋಡೊದು ಅಲ್ಲ. ಮಕ್ಕಳು ಮಲಗಿದ ವೇಳೆಗೆ ಮೊಬೈಲ್ ಉಪಯೋಗ ಮಾಡಬೇಕು.
ಮಗುವಿಗೆ ಹೆಚ್ಚಿನ ಸಮಯ ನೀಡಿಬೇಕು. ಪೋಷಕರು ಮೊಬೈಲ್ ಬದಲು ಮಗುವಿಗೆ ಸಾಕಷ್ಟು ಸಮಯ ನೀಡಬೇಕು. ಮೊಬೈಲ್ ಫೋನ್ ನೊಂದಿಗೆ ಆಟವಾಡುವ ಬದಲು, ಮಕ್ಕಳೊಂದಿಗೆ ಆಟವಾಡಬೇಕು, ಅವರೊಂದಿಗೆ ಮಾತನಾಡಬೇಕು, ಅವರನ್ನು ನೇಚರ್ ವಾಕ್ ಗೆ ಕರೆದೊಯ್ಯಬೇಕು. ಪರಿಸರವನ್ನು ಅನ್ವೇಷಿಸಬೇಕು. ಸ್ಟ್ರಾಂಗ್ ಪೋಷಕರು-ಮಗುವಿನ ಸಂಬಂಧವನ್ನು ನಿರ್ಮಿಸಲು ಇದು ಅತ್ಯುತ್ತಮ ಸಮಯವಾಗಿರುತ್ತೆ. ನಾವು ಏನು ಮಾಡುತ್ತೇವೋ ಅದನ್ನು ನೋಡಿ ಮಗು ಕಲಿಯುತ್ತೆ. ಇದು ನೆನಪಿನಲ್ಲಿ ಇರಬೇಕು. ಹಾಗಾಗೀ ಪೋಷಕರು ಕೂಡ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಆಗ ಮಗು ಹಠ ಮಾಡುವುದಿಲ್ಲ.