ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಕ್ಕಾಗಿ ಮಂಗಳೂರಿನ ಪೊಲೀಸ್ ತಂಡವೊಂದು ದಕ್ಷಿಣ ಕೊಡಗಿನ ಹೋಂ ಸ್ಟೇಯೊಂದಕ್ಕೆ ಭಾನುವಾರ ಭೇಟಿ ನೀಡಿದೆ.
ಪೊಲೀಸ್ ಇಲಾಖೆ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಅನ್ನುವ ಮಾಹಿತಿಯನ್ನು ಇಂಚಿಂಚೂ ಕಲೆಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಉಗ್ರರು ಎಲ್ಲೆಲ್ಲಿ ಸಂಚಾರ ನಡೆಸಿದ್ದಾರೆ ಅನ್ನುವುದರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟೊ ಶೆಟ್ಟಿಗೇರಿ ಸಮೀಪ ನಮ್ಮಲೆ ಗ್ರಾಮದ ಹೋಂ ಸ್ಟೇವೊಂದಕ್ಕೆ ತನಿಖಾ ತಂಡ ತೆರಳಿ ವಿಚಾರಣೆ ನಡೆಸಿದೆ. ಉಗ್ರರು ಹೋಂ ಸ್ಟೇಯಲ್ಲಿ ಉಳಿದುಕೊಂಡಿದ್ದರು ಅನ್ನುವ ಮಾಹಿತಿ ಮೇರೆಗೆ ಇಲ್ಲಿಗೆ ತನಿಖಾ ತಂಡ ಬಂದಿದ್ದು ಹೋಂ ಸ್ಟೇ ಮಾಲೀಕನಿಂದ ಮಾಹಿತಿ ಸಂಗ್ರಹಿಸಿದೆ.
ಕುಕ್ಕರ್ ಬಾಂಬರ್ ಶಾರಿಕ್ ನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈತ ನೀಡಿರುವ ಹೇಳಿಕೆಯ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.