ನ್ಯೂಸ್ ನಾಟೌಟ್ : ಮ್ಯಾಂಡಸ್ ಚಂಡಮಾರುತದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ , ಶೀತ ಹಾಗೂ ಕಡಿಮೆ ತಾಪಮಾನದ ಬದಲಾವಣೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಪರಿಸ್ಥಿತಿಯಲ್ಲಿ ಇನ್ನೂ ಹಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ನೀಡಿದೆ.ಯಾವೆಲ್ಲ ಆಹಾರಗಳನ್ನು ತೆಗೆದು ಕೊಳ್ಳಬೇಕು ಹಾಗೂ ಯಾವೆಲ್ಲ ಆಹಾರಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲುದು ಎಂಬುದರ ಪಟ್ಟಿ ನೀಡಲಾಗಿದೆ.
ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳಕೊಲ್ಲಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಚಳಿಗಾಲದ ದಿನಗಳಲ್ಲಿ ನಾಗರಿಕರು, ಮಕ್ಕಳು, ಗರ್ಭಿಣಿಯರು, ವೈದ್ಯರು, ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆರೋಗ್ಯ ಕಾಪಾಡಿಕೊಳ್ಳಲು ಎಚ್ಚರವಹಿಸಬೇಕು ಎಂದು ಆಯುಕ್ತ ರಂದೀಪ್ ಡಿ. ಸಲಹೆ ನೀಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳು ಯಾವುವು?
- ಬಿಸಿನೀರು ಕುಡಿಯುವುದು
- ಸುಲಭವಾಗಿ ಜೀರ್ಣವಾಗುವ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವಿಸುವುದು
- ರಾತ್ರಿಯ ಸಮಯ ಸ್ವೆಟರ್ ಸಾಕ್ಸ್ ಕೈವಸ್ತ್ರಗಳನ್ನು ಧರಿಸುವುದು
- ಅನಗತ್ಯವಾಗಿ ಹೊರ ಸಂಚಾರ ತಪ್ಪಿಸಬೇಕು
- ನೆಗಡಿ ,ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವವರಿಂದ ದೂರವಿರುವುದು.
- ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಮತ್ತು ಟಿಶ್ಯೂ ಪೇಪರ್ ಬಳಸಬೇಕು.
- ಕೆಮ್ಮು ನೆಗಡಿ ಜ್ವರದ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು.
- ತಣ್ಣಗಿನ ಪಾನೀಯಗಳನ್ನು ಸೇವಿಸಬಾರದು.
- ಜಂಕ್ ಫುಡ್ ಗಳನ್ನು ತಪ್ಪಿಸುವುದು.