ನ್ಯೂಸ್ ನಾಟೌಟ್: ನಮ್ಮ ಆರೋಗ್ಯವನ್ನು ಕಾಪಾಡಬಲ್ಲ ಎಲ್ಲಾ ಔಷಧಗಳು ನಿಸರ್ಗದಲ್ಲಿ ದೊರೆಯುತ್ತದೆ. ಸಸ್ಯದ ಬೇರುಗಳಿಂದ ಹಿಡಿದು ಹಣ್ಣುಗಳ ತನಕ ಎಲ್ಲವೂ ಒಂದೊಂದು ಔಷಧೀಯ ಗುಣಗಳನ್ನು ಹೊಂದಿದೆ. ಇದೀಗ ನಾವಿಲ್ಲಿ ತರಕಾರಿಯಲ್ಲಿ ಒಂದಾದ ನುಗ್ಗೆಕಾಯಿ ಬೀಜದ ಬಗ್ಗೆ ಹೇಳುತ್ತದ್ದೇವೆ.ನುಗ್ಗೆಕಾಯಿಯನ್ನು ಪದಾರ್ಥ ಮಾಡಲು ಯಥೇಚ್ಛವಾಗಿ ಬಳಸುತ್ತಾರೆ. ಇದು ಪದಾರ್ಥದ ರುಚಿಯನ್ನೇ ಹೆಚ್ಚಿಸುತ್ತದೆ. ಜತೆಗೆ ನಮ್ಮ ಆರೋಗ್ಯಕ್ಕು ಸಾಕಷ್ಟು ಪ್ರಯೋಜನಕಾರಿ. ನುಗ್ಗೆ ಸೊಪ್ಪಿನ ಸೇವನೆಯೂ ಆರೋಗ್ಯಕ್ಕೆ ಉತ್ತಮ.ನುಗ್ಗೆ ಬೀಜಗಳೂ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಭರಪೂರ ಲಾಭಗಳನ್ನು ನೀಡುತ್ತದೆ. ಹಾಗಾದರೆ ನುಗ್ಗೆ ಬೀಜಗಳಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
ಉತ್ತಮ ನಿದ್ದೆ
ನುಗ್ಗೆ ಕಾಯಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಗತ್ಯವಾದ ಅಮೈನೋ ಆಮ್ಲಗಳನ್ನು ಇರಿಸಿಕೊಂಡಿದೆ. ಬಿಸಿನೀರಿನಲ್ಲಿ 15 ನಿಮಿಷಗಳ ಕಾಲ ನುಗ್ಗೆಕಾಯಿ ಬೀಜಗಳನ್ನು ನೆನೆಸಿ. ಮಲಗುವ ಮೊದಲು ಆ ನೀರನ್ನು ಕುಡಿಯುವುದರಿಂದ ಉತ್ತಮ ನಿದ್ದೆಯನ್ನು ಪಡೆಯಬಹುದು.
ಮಧುಮೇಹ ನಿಯಂತ್ರಿಸುತ್ತದೆ:
ನುಗ್ಗೆಕಾಯಿಯ ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಸತುವಿನ ಅಂಶವಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ನುಗ್ಗೆ ಬೀಜಗಳನ್ನು ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಬಳಕೆ ಮಾಡುತ್ತಿದ್ದರೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಅಲ್ಲದೆ ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನೂ ಕೂಡ ನಿಯಂತ್ರಿಸುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡಕ್ಕೂ ಕೂಡ ಉತ್ತಮ ಮದ್ದಾಗಿದೆ.
ಕೀಲು ನೋವಿಗೆ ಪರಿಣಾಮಕಾರಿ ಮದ್ದು
ಈಗಂತೂ ಚಳಿಗಾಲ. ಸಂಧಿವಾತ, ಕೀಲುನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಆರೈಕೆ ಅಗತ್ಯವಾಗಿರುತ್ತದೆ. ಅದಕ್ಕೆ ನುಗ್ಗೆ ಬೀಜಗಳು ಅತ್ಯುತ್ತಮ ಮನೆಮದ್ದಾಗಲಿದೆ. ನುಗ್ಗೆ ಬೀಜಗಳು ಕ್ಯಾಲ್ಸಿಯಂನ್ನು ಪೂರೈಕೆ ಮಾಡುವ ಮೂಲಕ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಅಲ್ಲದೆ ಉರಿಯೂತ ಮತ್ತು ಸಂಧಿವಾತದಂತಹ ತೀವ್ರವಾದ ಮೂಳೆ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ನುಗ್ಗೆ ಬೀಜಗಳು ದೇಹದಲ್ಲಿನ ಆಕ್ಸಿಡೀಕೃತ ಲಿಪಿಡ್ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ. ಜೊತೆಗೆ ರಚನಾತ್ಮಕ ಹಾನಿಯಿಂದ ಹೃದಯ ಅಂಗಾಂಶವನ್ನು ರಕ್ಷಿಸುತ್ತದೆ. ವಿಜ್ಞಾನಿಗಳು ಇದನ್ನು ಸಾಬೀತುಪಡಿಸಿದ್ದಾರೆ.
ಚರ್ಮದ ಆರೈಕೆಗೆ ರಾಮಬಾಣ
ಕೆಲವು ಸಸ್ಯಗಳು ದೇಹದಲ್ಲಿನ ಕೊಬ್ಬನ್ನು ಚಯಾಪಚಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಅದರಲ್ಲಿ ನುಗ್ಗೆ ಸಸ್ಯ ಕೂಡ ಒಂದು.ಚರ್ಮದ ಆರೋಗ್ಯಕ್ಕೆ ನುಗ್ಗೆ ಬೀಜಗಳು ಉತ್ಕರ್ಷಣ ನಿರೋಧಕಗಳು, ಉರಿಯೂತದ ಮತ್ತು ನಂಜುನಿರೋಧಕಗಳಲ್ಲಿ ಸಮೃದ್ಧವಾಗಿವೆ. ಚರ್ಮದ ಆರೈಕೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಈ ಬೀಜದ ಎಣ್ಣೆಯನ್ನು ಚರ್ಮದ ಮಾಯಿಶ್ಚರೈಸರ್ ಆಗಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಯಲ್ಲಿ ಫೇಸ್ ಪ್ಯಾಕ್ ಆಗಿಯೂ ಬಳಸಬಹುದು. ಚರ್ಮದ ದದ್ದುಗಳ ನಿವಾರಣೆಗೆ ಕೂಡ ಸಹಾಯ ಮಾಡುತ್ತದೆ. ಈ ಬೀಜಗಳನ್ನು ತುಪ್ಪದಲ್ಲಿ ಹುರಿದು ಪಾಪ್ಕಾರ್ನ್ನಂತೆ ಸೇವನೆ ಮಾಡಬಹುದು. ಆದರೆ ನೆನಪಿಡಿ ಅತಿಯಾಗಿ ಸೇವನೆ ಬೇಡ. ವಾರದಲ್ಲೊಮ್ಮೆ 2 ರಿಂದ 3 ಚಮಚ ಸೇವನೆ ಮಾಡಿದರೆ ಸಾಕಾಗುತ್ತದೆ.