ನ್ಯೂಸ್ ನಾಟೌಟ್ : ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯವಾಗಿದೆ. ಅದರಲ್ಲೂ ಹೆಣ್ಣುಮಕ್ಕಳು ತನ್ನ ಸೌಂದರ್ಯಕ್ಕೆ ತೊಂದರೆ ಬರಬಾರದು ಎಂದು ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಚಳಿಗಾಲದಲ್ಲಿ ತುಟಿ ಒಡೆದು ಹೋಗುತ್ತದೆ. ಹಾಗಾಗಿ ಅದಕ್ಕೆ ಅಂಗಡಿಗಳಿಂದ ಖರೀದಿ ಮಾಡಿದ ಲಿಪ್ ಬಾಮ್ ಗಳನ್ನು ಬಳಸುತ್ತಾರೆ. ಇನ್ನುಮುಂದೆ ಮನೆಯಲ್ಲೇ ಸುಲಭ ರೀತಿಯಲ್ಲಿ ಲಿಪ್ ಬಾಮ್ ತಯಾರಿಸಬಹುದು.
ಅಂಗಡಿಗಳಲ್ಲಿ ಖರೀದಿಸುವ ಲಿಪ್ ಬಾಮ್ ಗಳು ಕೆಮಿಕಲ್ ನಿಂದ ಕೂಡಿರುತ್ತದೆ. ಅದರ ಬದಲು ಮನೆಯಲ್ಲೇ ತಯಾರಿಸಿದ ಲಿಪ್ ಬಾಮ್ ಹಚ್ಚಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ನೀವು ಮನೆಯಲ್ಲೇ ತಯಾರಿಸಿದ ಶುಚಿಯಾಗಿರುವ ಲಿಪ್ ಬಾಮ್ ಹಚ್ಚಬಹುದು.
ಬೀಟ್ ರೂಟ್ ಲಿಪ್ ಬಾಮ್:
ಎರಡು ಚಮಚ ಜೇನು ತುಪ್ಪ, ಒಂದು ಚಮಚ ವ್ಯಾಸ್ಲೀನ್ ಹಾಗೂ ತುರಿದ ಬೀಟ್ ರೂಟ್ ರಸವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ ಇಡಬೇಕು. ನಂತರ ಈ ಮಿಶ್ರಣವನ್ನು 20 ಸೆಕೆಂಡು ಬಿಸಿ ಮಾಡಬೇಕು. ಬಳಿಕ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರಿಜ್ ನಲ್ಲಿ ಇಟ್ಟು ಇದನ್ನು ಪ್ರತಿದಿನ ತುಟಿಗೆ ಹಚ್ಚುತ್ತಾ ಬನ್ನಿ..
ಸ್ಟ್ರಾಬೆರಿ ಲಿಪ್ ಬಾಮ್ :
ಮೊದಲಿಗೆ 6ರಿಂದ 7 ಹನಿಗಳಷ್ಟು ಸ್ಟ್ರಾಬೆರಿ ಪರಿಮಳ ತೈಲ ತೆಗದುಕೊಂಡು ಇದಕ್ಕೆ ಸ್ವಲ್ಪ ತೆಂಗಿನ ಎಣ್ಣೆ , ಜೇನು ತುಪ್ಪ , 3 ಚಮಚ ಕೋಕೋ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಬೇಕು. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರಿಜ್ ನಲ್ಲಿ ಇಟ್ಟು ಇದನ್ನು ಪ್ರತಿದಿನ ತುಟಿಗೆ ಹಚ್ಚಿ.
ರೋಸ್ ಲಿಪ್ ಬಾಮ್:
ಅರ್ಧ ಕಪ್ ಗುಲಾಬಿ ಎಸಳುಗಳನ್ನು ತೆಗೆದುಕೊಂಡು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಇದಕ್ಕೆ ಶಿಯಾ ಬಟರ್ ಸೇರಿಸಿ ಮೀಶ್ರಣ ಮಾಡಿದ ಬಳಿಕ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರಿಜ್ ನಲ್ಲಿ ಇಟ್ಟು ಪ್ರತಿದಿನ ಹಚ್ಚಬಹುದು.
ಕೊಕೋ ಬಟರ್ ಲಿಪ್ ಬಾಮ್:
ಮಾರುಕಟ್ಟೆಯಲ್ಲಿ ಲಭ್ಯವಿರುವ ಜೇನು ಹನಿಗಳ ಮೇಣವನ್ನು ತೆಗೆದುಕೊಂಡು ಅದನ್ನು ಬಿಸಿಗೆ ಕರಗಿಸಬೇಕು. ನಂತರ ಇದಕ್ಕೆ ಕೊಕೋ ಬಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಬಳಿಕ ಟಿನ್ ಗೆ ಹಾಕಿ ಫ್ರಿಜ್ ನಲ್ಲಿ ಇರಿಸಿ . ಬಳಿಕ ತುಟಿಗೆ ಹಚ್ಚಿಕೊಳ್ಳಿ.
ದ್ರಾಕ್ಷಿ ಲಿಪ್ ಬಾಮ್:
ಶಿಯಾ ಬಟರ್ , ಹರಳೆಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಬೇಕು. ನಂತರ ಇದಕ್ಕೆ ದ್ರಾಕ್ಷಿ ಹಣ್ಣಿನ ಪ್ಲೇವರ್ ಹಾಕಿ ಇಟ್ಟು ಬೇಕಾದಾಗ ಬಳಸಬಹುದು.