ನ್ಯೂಸ್ ನಾಟೌಟ್ : ಭಾರತ ದೇಶದಲ್ಲಿ ಹಲವು ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಏರು ಪೇರಾದಾಗ ಆಸ್ಪತ್ರೆ ಗೆ ಹೋಗಿ ಔಷಧಿಗಳನ್ನು ಪಡೆಯುತ್ತಾರೆ. ಆದರೆ ಅದರ ಬದಲು ಮನೆ ಮದ್ದು ಮಾಡಿ ಆರೋಗ್ಯವನ್ನು ಸುಧಾರಿಸಬಹುದು. ಹಾಗಾದ್ರೆ ಸಕ್ಕರೆ ಕಾಯಿಲೆಗೆ ಬೇವಿನ ಎಲೆ ಸೂಕ್ತವೇ …..?ತಿನ್ನುವ ಮೊದಲು ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ನೋಡಿ.
ಸಕ್ಕರೆ ಕಾಯಿಲೆ ಸಮಸ್ಯೆಯಿರುವವರು ಪ್ರತಿದಿನ ಕಹಿ ಬೇವಿನ ಎಲೆಗಳನ್ನು ಸೇವಿಸಬೇಕು . ಅದರ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ.ಕಹಿ ಬೇವಿನ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳು ಇದೆ. ಬೇವಿನ ಎಲೆಯಲ್ಲಿ ಕೀಟ ನಿವಾರಕ ಗುಣವಿದೆ. ಕಹಿಬೇವಿನ ಎಲೆಗಳನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕಾಗಿ ಹಾಗಲಕಾಯಿ, ಮೆಂತ್ಯ ಮತ್ತು ಲಿನ್ಸೆಡ್ ಬೀಜಗಳನ್ನು ಬಳಸಬಹುದು. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸಬೇಕು.ಆಹಾರ ಮತ್ತು ಪಾನೀಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು.
ಬೇವಿನ ಎಲೆಗಳನ್ನು ಸೇವಿಸುವುದು ಹೇಗೆ ?
- ನಮ್ಮ ದೇಹದ ರಕ್ತದ ಶುದ್ಧೀಕರಣದಲ್ಲಿ ಬೇವಿನ ಎಲೆಗಳು ಪ್ರಮುಖಪಾತ್ರ ಬೀರುತ್ತವೆ. ಬೇವಿನ ಎಲೆಗಳಲ್ಲಿ ವಿಟಮಿನ್-ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಅಂಶದ ಪ್ರಮಾಣ ಹೆಚ್ಚಾಗಿ ಸಿಗುತ್ತದೆ.
- ಇದರ ಜೊತೆಗೆ ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫ್ಲೇವನಾಯ್ಡ್ ಅಂಶಗಳು ಸಹ ಅಪಾರ ಪ್ರಮಾಣದಲ್ಲಿರುತ್ತವೆ. ಯಾರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ಬೇವಿನ ಎಲೆಗಳು ಬಹಳ ಪ್ರಯೋಜನಕಾರಿ.
- ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಇದರಲ್ಲಿ ಕಂಡುಬರುವ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶಗಳು ಎನ್ನಲಾಗಿದ್ದು, ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಾಗಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಬಲ್ಲದು. ಬೇವಿನ ಎಲೆಗಳಲ್ಲಿ ಕಂಡುಬರುವ ಕ್ಯಾಲ್ಸಿಯಂ ಅಂಶ ಕೂಡ ಮಧುಮೇಹ ಸಮಸ್ಯೆ ಇರುವ ಜನರಿಗೆ ತುಂಬಾ ಒಳ್ಳೆಯದು.
- ಯಾರು ಮಧುಮೇಹ ಸಮಸ್ಯೆಯನ್ನು ಹೊಂದಿರುತ್ತಾರೆ ಅಂತಹವರಿಗೆ ದೇಹದಿಂದ ಖನಿಜಾಂಶಗಳ ಪ್ರಮಾಣ ದೂರವಾಗುತ್ತದೆ. ಇದರಿಂದ ಕೀಲುಗಳ ನೋವು ಮತ್ತು ಮಾಂಸಖಂಡಗಳ ನೋವು ಮಾಯವಾಗುತ್ತದೆ. ಆರೋಗ್ಯಕರವಾದ ಮತ್ತು ಸದೃಢವಾದ ಮೂಳೆಗಳನ್ನು ಹೊಂದಲು ಕ್ಯಾಲ್ಸಿಯಂ ಅಂಶದ ಅಗತ್ಯತೆ ಇದ್ದೇ ಇರುತ್ತದೆ.
- ಕೆಲವು ಅಂದಾಜಿನ ಪ್ರಕಾರ ಹೇಳುವುದಾದರೆ, ಕಬ್ಬಿಣದ ಅಂಶದ ಕೊರತೆಯಿಂದ ಕೂಡ ಜನರಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಬೇವಿನ ಎಲೆಗಳನ್ನು ಆಗಾಗ ಜಗಿದು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಗ್ಲೈಸೆಮಿಕ್ ಸೂಚ್ಯಂಕ ನಿಯಂತ್ರಣಕ್ಕೆ ಬಂದು ಮೆಟಬಾಲಿಸಂ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ.
- ಆಹಾರ ಸೇವನೆ ಮಾಡಿದ ನಂತರ ಇದ್ದಕ್ಕಿದ್ದಂತೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದಿಲ್ಲ. ಇದಕ್ಕೆ ಬೇವಿನ ಎಲೆಗಳಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು ಬಿಡುವುದಿಲ್ಲ. ಹಾಗಾಗಿ ಬೇವಿನ ಎಲೆಗಳು ಮಧುಮೇಹ ಸಮಸ್ಯೆ ಇರುವವರಿಗೆ ತುಂಬಾ ಆರೋಗ್ಯಕರ.
ಪ್ರತಿದಿನ ವ್ಯಾಯಾಮ ಮಾಡಬೇಕು. ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಔಷಧಿಗಳನ್ನು ಮರೆತರೆ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಬಹುದು. ವೈದ್ಯರ ಸಲಹೆಯ ಮೇರೆಗೆ ಇನ್ಸುಲಿನ್ ಡೋಸ್ ಸಹ ತೆಗೆದುಕೊಳ್ಳಬಹುದು.
ಸಕ್ಕರೆ ಕಾಯಿಲೆಯ ಲಕ್ಷಣಗಳು:
- ಬೇಗನೆ ಆಯಾಸವಾಗುವುದು,
- ಮೂತ್ರದ ಸಮಸ್ಯೆ,
- ವಿಪರೀತ ಬಾಯಾರಿಕೆ,
- ಕೈ ಕಾಲುಗಳಲ್ಲಿ ನೋವು
- ತಲೆನೋವು
ಇವೆಲ್ಲವೂ ಸಕ್ಕರೆ ಕಾಯಿಲೆಯ ಲಕ್ಷಣಗಳು. ಇದಲ್ಲದೆ ಲೈಂಗಿಕ ತೊಂದರೆಯೂ ಉಂಟಾಗಬಹುದು. ಹಸಿವಾಗದೇ ಇರುವುದು, ಹಠಾತ್ ತೂಕ ನಷ್ಟ ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.