ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣವನ್ನು ವಿದ್ಯಾಕಾಶಿಯನ್ನಾಗಿಸಿದ ಶಿಕ್ಷಣ ತಜ್ಞ, ಸಮಾಜ ಸುಧಾರಕ ಕುರುಂಜಿ ವೆಂಕಟರಮಣ ಗೌಡರ ಹುಟ್ಟು ಹಬ್ಬ ವನ್ನು ‘ಸುಳ್ಯ ಹಬ್ಬ’ ವನ್ನಾಗಿ ಆಚರಿಸಲಾಗುತ್ತದೆ. ಇದರ ಆಮಂತ್ರಣ ಬಿಡುಗಡೆ ನ.30 ರಂದು ಕೆ.ವಿ.ಜಿ. ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು. ‘ಸುಳ್ಯ ಹಬ್ಬ’ ಡಿ. 25 ಮತ್ತು ಡಿ.26 ರಂದು ನೆರವೇರಲಿದೆ.
25 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಹಾಗೂ ಡಿ.26 ರಂದು ಕೆ.ವಿ.ಜಿ. ಕಾನೂನು ಕಾಲೇಜಿ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆ. ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಸ್ಥಾಪಕಾಧ್ಯಕ್ಷ ಎನ್. ಜಯಪ್ರಕಾಶ್ ರೈ, ನಿತ್ಯಾನಂದ ಮುಂಡೋಡಿ, ಪಿ.ಸಿ. ಜಯರಾಮ್, ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ಡಾ.ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಆನಂದ ಖಂಡಿಗ, ಶ್ರೀನಾಥ್ ಆಲೆಟ್ಟಿ, ವಿಜೇಶ್ ಹಿರಿಯಡ್ಕ, ಚಂದ್ರಾಕ್ಷಿ ಜೆ ರೈ, ಹರೀಶ್ ರೈ ಉಬರಡ್ಕ, ದಿನೇಶ್ ಮಡ್ತಿಲ, ಕೀರ್ತನ್ ಕೊಡಪಾಲ, ಶೈಲೇಶ್ ಅಂಬೆಕಲ್ಲು, ಎ.ಸಿ. ವಸಂತ, ಜನಾರ್ದನ ನಾಯ್ಕ, ಮಾಧವ ಮಡಪ್ಪಾಡಿ, ವಿಠಲ್ ಕಾಯರ್ತೋಡಿ ಇವರ ಸಮ್ಮುಖದಲ್ಲಿ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನೆರವೇರಿತು.