ನ್ಯೂಸ್ ನಾಟೌಟ್ : ಪ್ರತಿಯೊಬ್ಬರಲ್ಲು ಏನಾದರೊಂದು ಪ್ರತಿಭೆ ಅಡಗಿರುತ್ತದೆ. ಇಂತಹ ಪ್ರತಿಭೆಗೆ ದೊಡ್ಡ ವೇದಿಕೆಯಾಗಿ ನಿಂತಿದೆ ಸೋಷಿಯಲ್ ಮೀಡಿಯಾ.ಇಲ್ಲೊಂದು ಕಡೆ ಪ್ರಖ್ಯಾತ ಕಲಾವಿದರು ಬರಿ ಮರಳಿನಿಂದ ಕಲಾಕೃತಿಗಳನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ.ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಕಣ್ಮನ ಸೆಳೆದ ಕಲಾಕೃತಿ:
ಕಾಸರಗೋಡಿನ ಬೇಕಲ ಅಂತಾರಾಷ್ಟೀಯ ಕಡಲ ಕಿನಾರೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಡು ಬಂದ ದೃಶ್ಯವಿದು.ಬರಿ ಮರಳು ಮತ್ತು ನೀರಿನಿಂದ ಮಾಡಿದ ಈ ಕಲಾಕೃತಿಗಳು ನೋಡುಗರನ್ನು ಬೆರಗುಗೊಳಿಸುವಂತೆ ಮಾಡುತ್ತವೆ.ಈ ಉತ್ಸವದಲ್ಲಿ ಪಾಲ್ಗೊಂಡ ಜನ ಈ ಕಲಾಕೃತಿ ನೋಡಿ ಮರುಳಾದರು.ಇಲ್ಲಿ ಜಗಮುಖ, ಹೆಣ್ಣು, ಮತ್ಸ್ಯೆಕನ್ಯೆ. ಕಥಕ್ಕಳಿ, ಭರತನಾಟ್ಯಂ ಮೊದಲಾದ ವಿವಿಧ ಕಲಾಕೃತಿಗಳನ್ನು ಮಾಡಿದ್ದು ಅದ್ಭುತ ಲೋಕವನ್ನೇ ಸೃಷ್ಟಿ ಮಾಡಿದ ಕ್ರೆಡಿಟ್ ಕಲಾವಿದನಿಗೆ ಸಲ್ಲುತ್ತೆ.
ಬಾರಿ ವೈರಲ್:
ಮರಳು ಶಿಲ್ಪ ಕಲಾವಿದರಾದ ಸಜೀವ್ ಸ್ವಾಮಿ, ವಾಸವನ್ ಪಯ್ಯಟ್ಟಂ, ಟಿನು, ರಮೇಶ್ ನಡುವೆಲ್, ರಿನು ಫಿಲಿಪ್, ನಿಧೀಶ್ ಪ್ರಭಾಕರ್, ರವೀಣಾ, ಸ್ವಾತಿ,ರಶ್ಮಿ, ಶ್ರೀ ಲಕ್ಷ್ಮೀ ಮುಂತಾದ ಕಲಾವಿದರು ಕಲಾಕೃತಿಗಳಿಗೆ ಜೀವ ತುಂಬಿದ್ದಾರೆ. ಅದರಲ್ಲೂ ಇವರು ನಿರ್ಮಿಸಿದ ಕೇರಳದ ಪ್ರಸಿದ್ದ ಕಲಾಕೃತಿಯಾದ ಕಥಕ್ಕಳಿಯನ್ನು ನೋಡಲು ಹೆಚ್ಚಿನ ಕಡೆಗಳಿಂದ ಜನಸಾಗರ ಹರಿದುಬಂದಿತು.ಈ ಕಲಾಕೃತಿಗಳ ಮುಂದೆ ಕೆಲ ಜನ ಸೆಲ್ಫಿ ತೆಗೆದು ಸೋಶಯಲ್ ಮೀಡಿಯಾದಲ್ಲಿ ಹರಿಯಬಿಟ್ಟರೆ, ಇನ್ನು ಕೆಲವರು ವಿಡಿಯೋವನ್ನು ಮಾಡಿ ಸ್ಟೇಟಸ್, ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.ಒಟ್ಟಾರೆ ಇವರ ಕಲಾಕೃತಿಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.