ನ್ಯೂಸ್ ನಾಟೌಟ್ : ಹುಟ್ಟಿದ ಮಗು ಸ್ವಲ್ಪ ದೊಡ್ಡದಾಗಿ ಅದಕ್ಕೆ ಬುದ್ದಿ ಬರುವವರೆಗೆ ಪೋಷಕರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಮನೆಯಲ್ಲಿ ಮಕ್ಕಳ ಕೈಗೆ ಸಣ್ಣ-ಪುಟ್ಟ ವಸ್ತುಗಳು,ಮಣಿ,ನಾಣ್ಯ,ಚೂಪಾದ ವಸ್ತುಗಳು ಸಿಗದಂತೆ ಜಾಗೃತೆವಹಿಸಿಕೊಳ್ಳಬೇಕು.ಇಲ್ಲದಿದ್ದಲ್ಲಿ ಅಪಾಯವಾಗಬಹುದು.
ಬೆಂಗಳೂರಲ್ಲಿ 8 ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಎದುರಿಗಿದ್ದ ಬಾಟಲ್ನ ರಬ್ಬರ್ ಮುಚ್ಚಳ ನುಂಗಿದೆ. ಮಗು ಕ್ಯಾಪ್ ನುಂಗಿರೋದನ್ನುಮನೆಯಲ್ಲಿ ಯಾರು ಗಮನಿಸಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಮಗುವಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಮಗು ಆಹಾರ ಸೇವಿಸೋದನ್ನೇ ನಿಲ್ಲಿಸಿದೆ. ಪೋಷಕರು ಮಗುವನ್ನು ವೈದ್ಯರ ಬಳಿ ಕರೆದೊಯ್ದ ಬಳಿಕ ಮಗು ಬಾಟಲಿನ ಮುಚ್ಚಳ ನುಂಗಿರುವ ವಿಷಯ ಬೆಳಕಿಗೆ ಬಂದಿದೆ.
ಬಾಟಲಿಯನ್ನೇ ಆಟಿಕೆಯೆಂದು ತಿಳಿದು ಮಗು ಆಟವಾಡಲು ಶುರು ಮಾಡಿದೆ.ಬಳಿಕ ಬಾಟಲಿಯ ಮುಚ್ಚಳ ಓಪನ್ ಆಗಿ ಆಕಸ್ಮಿಕವಾಗಿ 2 ಸೆಂ.ಮೀನ ಬಾಟಲ್ನ ರಬ್ಬರ್ ಮುಚ್ಚಳ ನುಂಗಿದೆ. ಪೋಷಕರು ಮಗು ಮುಚ್ಚಳ ನುಂಗಿದೆ ಅನ್ನೋದನ್ನು ತಿಳಿಯದೇ ಆರೋಗ್ಯ ಹದಗೆಟ್ಟು, ಧ್ವನಿ ಬದಲಾದ ಬಳಿಕ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕರೆದು ತಂದಿದ್ದಾರೆ. ಫೋರ್ಟಿಸ್ ಆಸ್ಪತ್ರೆ ವೈದ್ಯರು ಮಗುವನ್ನುಪರೀಕ್ಷಿಸಿ ಮುಚ್ಚಳವನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಎನ್ಟಿ ತಜ್ಞ ಡಾ. ಎಚ್. ಕೆ. ಸುಶೀನ್ ದತ್ ಹಾಗೂ ಡಾ ನರೇಂದ್ರನಾಥ್ ಅವರ ತಂಡ ಈ ಚಿಕಿತ್ಸೆ ನಡೆಸಿದರು.
8 ತಿಂಗಳ ಗಂಡು ಮಗುವು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ರಬ್ಬರ್ನಂತಿದ್ದ ಬಾಟಲ್ನ ಮುಚ್ಚಳವನ್ನು ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ಧ್ವನಿಯೂ ಕ್ಷೀಣಿಸುತ್ತಾ ಬಂದಿದೆ, ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಹಾರ ಸೇವಿಸುತ್ತಿರಲಿಲ್ಲ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ದನಿ ಹೊರಡುತ್ತಿತ್ತು. ಇದರಿಂದ ಗಾಬರಿಯಾದ ಕುಟುಂಬಸ್ಥರು ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದರು. ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದಾಗ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ತಿಳಿದು ಬಂದಿತ್ತು. ಕೂಡಲೇ ಆ ಮುಚ್ಚಳವನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾದೆವು ಎಂದು ಡಾ ನರೇಂದ್ರನಾಥ್ ಹೇಳಿದರು.