ನ್ಯೂಸ್ ನಾಟೌಟ್ : ವಿದೇಶದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೇ ಭಾರತದಲ್ಲಿಯೂ ಕೊರೊನಾ ನಿಯಮಗಳನ್ನು ಪಾಲಿಸಿ ಈ ಎಂದು ಕೇಂದ್ರವು ರಾಜ್ಯಗಳಿಗೆ ಸೂಚನೆಯನ್ನು ನೀಡಿತ್ತು.ಇದೀಗ ಬೆಂಗಳೂರು ಕೂಡ ಅಲರ್ಟ್ ಆಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಅಟ್ಟಹಾಸದಿಂದ ನಲುಗಿದ್ದ ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಬೇಡ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯವರು ಹೇಳಿದ್ದಾರೆ.
ಕೊರೊನಾ ಹೆಚ್ಚಳ ಭೀತಿ:
ಹೊಸ ವರ್ಷ ಸೆಲೆಬ್ರೆಷನ್ ಅನುಮತಿ ನೀಡಿದರೆ ಸೋಂಕು ಹೆಚ್ಚಳವಾಗುವ ಭೀತಿಯಿಂದ ಸೆಲೆಬ್ರೆಷನ್ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.ಸಾಮಾಜಿಕ ಅಂತರ ಕಡ್ಡಾಯಗೊಳಿಸಲು ತಜ್ಞರ ಸಲಹೆ ಕೇಳಿದ್ದು, ತಜ್ಞರಿಂದ ನ್ಯೂ ಇಯರ್ ಸೆಲೆಬ್ರೇಷನ್ ಬೇಡವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಮಾಸ್ಕ್ ಕಡ್ಡಾಯಕ್ಕೆ ಚಿಂತನೆ:
ಕೊರೊನಾ ದಿಂದ ಚೇತರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ವ್ಯಾಪಾರಿಗಳು ಶಾಕ್ ಆಗಿದ್ದಾರೆ.ಕ್ರಿಸ್ ಮಸ್, ಹೊಸ ವರ್ಷ ಹೀಗೆ ಖರೀದಿಗಾಗಿ ಗ್ರಾಹಕರು ಶಾಪ್ ಗಳತ್ತ ಹೆಜ್ಜೆ ಹಾಕುತ್ತಾರೆ.ಆದರೆ ಬಿಬಿಎಂಪಿ ಯ ಈ ಹೇಳಿಕೆ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿದೆ. ಈಗಾಗಲೇ ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿನ ಮಧ್ಯರಾತ್ರಿಯ ಸೆಲೆಬ್ರೇಷನ್ಗೆ ರಿಸ್ಟಿಕ್ಷನ್ ಹಾಕಲು ಚಿಂತನೆ ನಡೆಸಲಾಗಿದ್ದು,ಹೊಟೇಲ್, ಮಾಲ್ಗಳಿಗೂ ಟೈಮ್ ಲಿಮಿಟ್ ನೀಡಲು ಚಿಂತನೆ ಮಾಡಲಾಗಿದೆ.ಇದರ ಜತೆಗೆ ಮಾಸ್ಕ್ ಕಡ್ಡಾಯಕ್ಕೂ ಚಿಂತನೆ ನಡೆಸಲಾಗುತ್ತಿದೆ. ರೈಲು ಬಸ್ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಸಾಧ್ಯತೆಯಿದೆ. ಇನ್ನು ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಹೊರದೇಶದಿಂದ ನಗರಕ್ಕೆ ಹಲವು ವಿದೇಶಿಗರು ಬರುತ್ತಾರೆ.
ಇಂದು ಸಿಎಂ ಮಹತ್ವದ ಸಭೆ:
ಕೊರೊನಾ ವೈರಸ್ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಸಂಬಂಧ ಇಂದು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.ಇಂದು ಸುವರ್ಣಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.