ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ಜಾತಿ -ಧರ್ಮ ಮೀರಿ ಅದ್ಧೂರಿ ಪ್ರದರ್ಶನ ಕಂಡಿದೆ. ಎಲ್ಲ ಧರ್ಮದವರೂ ಈ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಸುಳ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸಿನಿಮಾ ನೋಡಿದರೂ ಅನ್ನುವ ಕಾರಣಕ್ಕೆ ಅವರದ್ದೇ ಕೋಮಿಗೆ ಸೇರಿದ ಕೆಲವು ವ್ಯಕ್ತಿಗಳು ಸೇರಿಕೊಂಡು ಸಿನಿಮಾ ಥೀಯೇಟರಿನ ಎದುರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಳ್ಯದಲ್ಲಿ ಕಾಂತಾರ ಸಿನಿಮಾದ ಕನ್ನಡ ಅವತರಿಣಿಕೆ ಅದ್ಭುತ ಯಶಸ್ಸನ್ನು ಕಂಡಿತ್ತು. ಇದೀಗ ಸುಳ್ಯದ ಸಂತೋಷ್ ಥೀಯೇಟರಿನಲ್ಲಿ ಕಾಂತಾರ ತುಳು ಸಿನಿಮಾದ ಅವತರಿಣಿಕೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದನ್ನು ವೀಕ್ಷಿಸುವುದಕ್ಕಾಗಿ ಬೆಳಗ್ಗೆ ೧೧ ಗಂಟೆಯ ಶೋಗೆ ಕೇರಳ ಮೂಲದ ಸ್ನೇಹಿತರಿಬ್ಬರು ತಮ್ಮ ಬೈಕ್ ನಲ್ಲಿ ಬಂದಿದ್ದರು. ಬಂದಿದ್ದವರಲ್ಲಿ ವಿದ್ಯಾರ್ಥಿನಿ ಬುರ್ಕಾ ಧರಿಸಿದ್ದಳು. ಸಿನಿಮಾ ಆರಂಭವಾಗುವ ೧೦ ನಿಮಿಷ ಮೊದಲು ಬಂದಿದ್ದರು. ಹೀಗಾಗಿ ಅವರು ಸಿನಿಮಾ ಥೀಯೇಟರಿನ ಬೈಕ್ ಸ್ಟ್ಯಾಂಡ್ ಬಳಿ ನಿಂತಿದ್ದರು. ಈ ವೇಳೆ ಅವರನ್ನು ಗಮನಿಸಿ ಸ್ಥಳಕ್ಕೆ ಕೆಲವರು ಆಗಮಿಸಿದ್ದಾರೆ. ಅವರನ್ನು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಆದರೆ ಹಲ್ಲೆ ಮಾಡಿದಾತನನ್ನು ಬಂಧಿಸಲು ಹೋದಾಗ ಆತ ಪೊಲೀಸರನ್ನು ಕಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.