ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್ : ಕನ್ನಡವು ಉಳಿಯಬೇಕಾದರೆ ಕರ್ನಾಟಕವನ್ನು ಮತ್ತು ಭಾಷೆಯನ್ನು ಉಳಿಸಬೇಕು ಎಂದು ೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೆ.ಆರ್ ಗಂಗಾಧರ್ ಅಭಿಪ್ರಾಯಪಟ್ಟಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಕನ್ನಡವನ್ನು ಉಳಿಸುವುದೆಂದರೆ ಕೇವಲ ಭಾಷೆಯನ್ನು ಮಾತ್ರ ಉಳಿಸುವುದಲ್ಲ. ಕನ್ನಡದ ಸಂಸ್ಕೃತಿ ,ಕನ್ನಡ ಪರಂಪರೆ, ಇತಿಹಾಸ, ವೈವಿದ್ಯಮಯ ಜೇವನ, ನಾಡು, ನುಡಿ, ಗಾಳಿ, ಜಲ, ಹೀಗೆ ಕನ್ನಡನಾಡಿನ ಸಾರ್ವಭೌಮತ್ವ ಉಳಿಸುವುದಾಗಿದೆ. ಇದು ಆಚಾರ, ವಿಚಾರ, ನಡೆನುಡಿಗಳಲ್ಲಿ ಕನ್ನಡವು ಪ್ರತಿನಿಧಿಸಬೇಕು. ಕನ್ನಡ ಜನತೆಯು ಕನ್ನಡ ಕಲಿತು ವ್ಯವ್ಯವಹರಿಸುವ ಜ್ಞಾನದ ಕೌಶಲ್ಯ ಬೆಳಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಕಡ್ಡಾಯವಾಗಿ ಕಲಿಯುವಂತೆ ಮಾಡಬೇಕು. ನಮ್ಮಲ್ಲಿರುವ ಧರ್ಮ, ಜಾತಿ, ಮತ ,ಪಂಥ, ಮಾತೃ ಭಾಷೆಗಳ ವೈಷಮ್ಯ ತೊಡೆದು ಹಾಕಿ ನಾವೆಲ್ಲರೂ ಒಂದೇ ಎಂದು ಕನ್ನಡಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂದರು.
೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಎಲ್ಲ ಗಣ್ಯ ಅತಿಥಿಗಳನ್ನು ಉಮ್ಮರ್ ಬೀಜದಕಟ್ಟೆ ಸ್ವಾಗತಿಸಿದರು. ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ವಿಮರ್ಶಕ ಎಸ್ ಆರ್ ವಿಜಯ ಶಂಕರ್, ಸ್ಮರಣ ಸಂಚಿಕೆ ಬಿಡುಗಡೆಯನ್ನು ಮೀನುಗಾರಿಕಾ ಹಾಗೂ ಒಳನಾಡು ಸಚಿವ ಎಸ್ ಅಂಗಾರ, ಹೊಸ ಕೃತಿ ಬಿಡುಗಡೆ ಆಕಾಶವಾಣಿಯ ಸುಬ್ರಾಯ ಸಂಪಾಜೆ ಮಾಡಿದರು, ಮುಖ್ಯ ಅತಿಥಿಗಳಾಗಿ ಮೋಹನರಾಮ ಸುಳ್ಳಿ, ಸಮ್ಮೇಳನದ ಆಶಯ ನುಡಿಯನ್ನು ದಕ್ಷಿಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀನಾಥ ಹಾಗೂ ಚಂದ್ರಶೇಖರ ಪೇರಾಲು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ . ಹಮೀದ್, ದಾಮೋದರ ಮಾಸ್ಟರ್ , ಲೀಲಾಧರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜನತೆಯನ್ನು ಒಂದುಗೂಡಿಸುವುದಾಗಿದೆ ಎಂದು ಸಚಿವ ಮತ್ತು ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ. ಪ್ರತೀ ವರ್ಷ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸುವುದು ನಾಡಿನ ಕಲೆ ,ಸಂಸ್ಕೃತಿ ಮತ್ತು ಮೌಲ್ಯಗಳ ಜಾಗೃತಿ ಮೂಡಿಸುವುದಾಗಿದೆ. ಜನರು ಕೂಡಾ ಕನ್ನಡಕ್ಕೆ, ಸಾಹಿತ್ಯಕ್ಕೆ ಮಹತ್ವವನ್ನು ಕೊಡುವ ಕೆಲಸ ಮಾಡುತ್ತಾರೆ. ನಮ್ಮ ರಾಜ್ಯ, ಭಾಷೆಯ ಜಲ, ನೆಲದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಇದರಿಂದ ನಾವು ಎಲ್ಲರೂ ಒಂದೇ ಎಂಬುವ ಮೂಲಕ ಕನ್ನಡವನ್ನು ಉಳಿಸಿಕೊಂಡು ಬೆಳಸಿಕೊಳ್ಳಲು ಸಹಾಯಕವಾಗಿದೆ.
ಇದಕ್ಕೂ ಮೊದಲು ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರವಣಿಗೆ ಮೂಲಕ ಶನಿವಾರ ಬೆಳಗ್ಗೆ ಅದ್ಧೂರಿ ಚಾಲನೆ ಸಿಕ್ಕಿತು. ಮರವಣಿಗೆಗೆ ಸಂಪಾಜೆ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾಡಿದರು. ದೊಡ್ಡಡ್ಕದ ಬೈಲೆಯಿಂದ ಹೊರಟ ಮೆರವಣಿಗೆಯಲ್ಲಿ ಮೊದಲು ಕನ್ನಡ ಬಾವುಟ , ಗೊಂಬೆಗಳು , ಎನ್ ಸಿಸಿ, ಸ್ಕೌಟ್, ಕನ್ನಡ ಮಾತೆಯ ಬಾವುಟವನ್ನು ಹಿಡಿದ ಪುಟಾಣಿ ಮಕ್ಕಳು, ಚೆಂಡೆ, ವಿವಿಧ ಮಹಿಳಾ ತಂಡದಿಂದ ಕಲಶ, ವಾದ್ಯಘೋಷಗಳೊಂದಿಗೆ ಅನೇಕ ಸಾಹಿತಿಗಳು, ಗ್ರಾಮಸ್ಥರು ,ಹಾಗೂ ವಿವಿಧ ಊರುಗಳಿಂದ ಸಾವಿರಾರು ಮಂದಿ ಕನ್ನಡ ಮಾತೆಯ ಮೆರವಣಿಗೆಯಲ್ಲಿ ಪಾಲ್ಗೊಂಡು, ಸಜ್ಜನ ಸಭಾಭವನ ಬೀಜದಕಟ್ಟೆಯ ವೇದಿಕೆಗೆ ತಲುಪಿದರು.